ಜಾತಿ, ಧರ್ಮವನ್ನು ಪರಿಗಣಿಸದೆ ಎಲ್ಲರೂ ಒಗ್ಗಟ್ಟಾಗಿ ಕೊರೋನಾ ದ ವಿರುದ್ಧ ಹೋರಾಡಬೇಕಾಗಿದೆ- ಟಿ.ಎಂ.ಶಹೀದ್ ತೆಕ್ಕಿಲ್…
ಸುಳ್ಯ: ದೇಶದಲ್ಲಿ ವೈದ್ಯಕೀಯ ವ್ಯವಸ್ಥೆ ಹದಗೆಟ್ಟಿದೆ. ದೇಶದಲ್ಲಿ ಆಸ್ಪತ್ರೆಗಳು, ವೈದ್ಯರು, ನರ್ಸ್ ಗಳು,ಆಕ್ಸಿಜನ್,ವೆಂಟಿಲೇಟರ್, ಬೆಡ್ ಗಳ ಕೊರತೆಯಿದೆ. ಮಾತ್ರವಲ್ಲದೆ ಸ್ಮಶಾನದಲ್ಲೂ ಜಾಗ ಸಾಲುತ್ತಿಲ್ಲ.ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಯಾರೂ ಕೂಡ ಜಾತಿ, ಮತ, ಧರ್ಮವನ್ನು ಪರಿಗಣಿಸದೆ ಎಲ್ಲರೂ ಒಗ್ಗಟ್ಟಾಗಿ ಕೊರೋನಾ ದ ವಿರುದ್ಧ ಹೋರಾಡಬೇಕಾಗಿದೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್ ಹೇಳಿದ್ದಾರೆ.
ಅವರು ಸುಳ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಸುಳ್ಯ ಮತ್ತು ಕಡಬ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೊರೊನಾ ಸಂದರ್ಭದಲ್ಲಿ ರೋಗಿಗಳ ಅನುಕೂಲಕ್ಕಾಗಿ ತುರ್ತು ಉಚಿತ ಅಂಬ್ಯುಲೆನ್ಸ್ ಸೇವೆಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಅಂಬ್ಯುಲೆನ್ಸ್ ನ್ನು ಕೊಡುಗೆಯಾಗಿ ನೀಡಿದ ಕೆಪಿಸಿಸಿಯ ಸುಳ್ಯ ಉಸ್ತುವಾರಿ ಜಿ.ಕೃಷ್ಣಪ್ಪ ಅವರನ್ನು ಅಭಿನಂದಿಸಿದ ಟಿ.ಎಂ.ಶಹೀದ್ ಅವರು ಕೊರೋನಾ ವಿರುದ್ಧ ದ ಹೋರಾಟಕ್ಕಾಗಿ ಕಾಂಗ್ರೆಸ್ ಪಾರ್ಟಿ ಕಟಿಬದ್ಧವಾಗಿದೆ. ಎ ಐ ಸಿ ಸಿ ಯ ರಾಹುಲ್ ಗಾಂಧಿ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀನಿವಾಸ್ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ದೇಶದ ಮತ್ತು ರಾಜ್ಯದ ಎಲ್ಲಾ ಭಾಗಗಳಲ್ಲಿ ಕೊರೋನಾ ದಿಂದಾಗಿ ತೊಂದರೆಯುಂಟಾಗಿರುವ ಬಡವರಿಗೆ ವಿವಿಧ ರೀತಿಯ ಸಹಾಯಗಳನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದೂ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ ಜಯರಾಮ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ , ಎಂ.ವೆಂಕಪ್ಪ ಗೌಡ, ಧನಂಜಯ ಅಡ್ಬಂಗಾಯ, ಕೆಪಿಸಿಸಿ ಸದಸ್ಯ ಡಾ.ರಘು, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಪಿ.ಎಸ್. ಗಂಗಾಧರ್, ಸುಳ್ಯ ನ.ಪಂ ಮಾಜಿ ಅಧ್ಯಕ್ಷ ಎಸ್ ಸಂಶುದ್ದೀನ್, ಕೆ.ಎಂ ಮುಸ್ತಾಫ, ಸುಳ್ಯ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಕೀರ್ತನ್ ಕೊಡಪ್ಪಾಲ , ಶಾಫಿ ಕುತ್ತಮೊಟ್ಟೆ ಉಪಸ್ಥಿತರಿದ್ದರು.