ಹಾರುತಿರಲಿ ಬಾವುಟ…
 ಹಾರುತಿರಲಿ ಬಾವುಟ…
ಭಾವಪೂರ್ಣ ನಮನ ನಿಮಗೆ
 ಮನಸಿನಾಳದಿಂದ
 ದೇಶವನ್ನು ಉಳಿಸಿ ಕೊಟ್ಟ
 ಧೀರ ವೀರ ಹಿರಿಯರೆ
ನಿಮ್ಮ ಸುಖವ ಮರೆತು ನೀವು
 ನಮಗೆ ಹಿತವ ತಂದಿರಿ
 ಸ್ವಾರ್ಥವನ್ನು ಮರೆತು ನೀವು
 ದೇಶಕಾಗಿ ದುಡಿದಿರಿ
ಹಸಿವು ನಿದ್ದೆ ಎಲ್ಲ ತೊರೆದು
 ಟೊಂಕ ಕಟ್ಟಿ ನಿಂತಿರಿ
 ಸತ್ಯ ಶಾಂತಿ ತ್ಯಾಗಗಳಲಿ
 ನೇಮದಿಂದ ನಡೆದಿರಿ
ಸಾವು ನೋವು ನಿತ್ಯ ಕಂಡು
 ಮನದಲಿನಿತು ಕುಂದದೆ
 ಧೈರ್ಯದಿಂದ ಮುಂದೆ ನುಗ್ಗಿ
 ಗೆಲುವು ನಮಗೆ ಕೊಟ್ಟಿರಿ
ಏರಿಸುವೆವು ಹಾರಿಸುವೆವು
 ನಿಮ್ಮ ಹೆಮ್ಮೆ ಪತಾಕೆಯ
 ಕುಂದನೆಂದೂ ತಾರದಂತೆ
 ಬೀಸುತಿರಲಿ ಬಾವುಟ

ರ: ಡಾ. ವೀಣಾ ಎನ್ ಸುಳ್ಯ





