ಪುಣ್ಯ ಚೇತನ…

ಪುಣ್ಯ ಚೇತನ…

ಜನಾಂಗದ ದನಿಯಾಗಿ
ದಲಿತರ ನೋವಿಗೆ ಸಿರಿಯಾಗಿ
ಚಳುವಳಿಗಳ ಶಕ್ತಿಯಾಗಿ
ಹೋರಾಟಕ್ಕೆ ಕೆಚ್ಚು ತುಂಬಿದವರು

ಅಸಮಾನತೆ, ಧರ್ಮ ಜಾತಿಗಳ
ನಡುವಿನ ಸಂಘರ್ಷಗಳು
ನೋವು ಹಸಿವಿಗಳಂಥ
ಒಳಸಂಕಟಗಳಿಗೆ ಧ್ವನಿಯಾದವರು

ಬಂಡಾಯದ ಖಣಿ
ದಮನಿತರ ದನಿ
ಕನ್ನಡದ ಮಣಿ
ಎಂದೆನಿಸಿದವರು

ಬದುಕಿನ ಹೋರಾಟಕ್ಕೆ
ಸ್ಫೂರ್ತಿ ತುಂಬಿದವರು
ಕೃತಿಗಳ, ಪ್ರಶಸ್ತಿಗಳ ಒಡೆಯ
ನಮ್ಮಯ ಗುರು ಇವರು

ಸುಮಾ ಬಸವರಾಜ ಹಡಪದ
ಹಳಿಯಾಳ (ತಾ ), ಉತ್ತರಕನ್ನಡ (ಜಿಲ್ಲೆ ), ಮೊ: 9108740044

Sponsors

Related Articles

Back to top button