ಸುಳ್ಯ – ಕೆ.ವಿ.ಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿಗೆ ಸತತ ನಾಲ್ಕನೇ ಬಾರಿಗೆ ಶೇ100 ಪಲಿತಾಂಶ…

ಸುಳ್ಯ: ವಿಜ್ಞಾನ ವಿಭಾಗದಲ್ಲಿ ಎಂ ಅರ್ ಶೃತಿ, ಶಿವಕೃಷ್ಣ, ಕೆ ಅನುಷ ಪ್ರಭು, ಅನನ್ಯ ಲಕ್ಷ್ಮಿ ಎನ್, ಆಯಿಶತ್ ಹಾಶಿರ ವಿದ್ಯಾರ್ಥಿಗಳು 600 ಅಂಕ ಗಳಿಸಿರುತ್ತಾರೆ. ಒಟ್ಟು ವಿಜ್ಞಾನ ವಿಭಾಗದಲ್ಲಿ 52 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 36 ಡಿಸ್ಟಿಂಕ್ಷನ್ ಮತ್ತು ಉಳಿದೆಲ್ಲಾ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ ಸ್ವಾತಿ ಜೆ.ಪಿ.-588, ಸಾರ್ಥಕ್ ಭಟ್-584 ವಿಜೆತ್ ಶೆಟ್ಟಿ-555 ಕನಸು-531 ರಚಿತ್-530 ಅಂಕಗಳನ್ನು ಪಡೆದಿರುತ್ತಾರೆ. 35 ವಿದ್ಯಾರ್ಥಿಗಳಲ್ಲಿ 9 ಡಿಸ್ಟಿಂಕ್ಷನ್ ಮತ್ತು ಉಳಿದೆಲ್ಲಾ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಇವರಿಗೆ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ಕಾಲೇಜಿನ ಡಾ. ರೇಣುಕಾ ಪ್ರಸಾದ್ ಕೆ ವಿ, ಕಾಲೇಜಿನ ಪ್ರಾಂಶುಪಾಲರಾದ ಡಾ ಯಶೋದ ರಾಮಚಂದ್ರ ಅವರು ಅಭಿನಂದನೆ ಸಲ್ಲಿಸಿರುತ್ತಾರೆ.