ಹಿಂದೂ ರುದ್ರ ಭೂಮಿ ದೇವಭೂಮಿ ಕಂಚಿನಡ್ಕಪದವು – ಆಂಬುಲೆನ್ಸ್ ವಾಹನದ ಲೋಕಾರ್ಪಣೆ…

ಬಂಟ್ವಾಳ: ಸಜೀಪನಡು ಹಾಗೂ ಸುತ್ತಲಿನ 7 ಗ್ರಾಮಗಳಿಗೆ ಅತೀ ಅವಶ್ಯಕವಾಗಿ ಬೇಕಾಗಿದ್ದ ಆಕ್ಸಿಜನ್ ಸಹಿತ ಆಂಬುಲೆನ್ಸ್ ವಾಹನದ ಲೋಕಾರ್ಪಣೆ ಕಾರ್ಯವು ಅ. 4 ರಂದು ಸಜೀಪ ನಡುವಿನ ದೇರಾಜೆಯಲ್ಲಿ ನಡೆಯಿತು.
ವಿಧಾನಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಇವರು ಆಂಬುಲೆನ್ಸ್ ವಾಹನವನ್ನು ಲೋಕಾರ್ಪಣೆಗೈದರು. ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಭಾಜಪ ಉಪಾಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ರೈ ಬೋಳಿಯಾರು, ದ.ಕ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸತೀಶ್ ಕುಂಪಲ, ಹಿಂದೂ ರುದ್ರ ಭೂಮಿ ಕಂಚಿನಡ್ಕ ಪದವು ಇದರ ಅಧ್ಯಕ್ಷರಾದ ಯಶವಂತ ದೇರಾಜೆ ಗುತ್ತು, ಸಜೀಪ ನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಮುಳ್ಳುಂಜ ವೆಂಕಟೇಶ್ವರ ಭಟ್, ಪ್ರಗತಿಪರ ಕೃಷಿಕ ಚಿನ್ಮಯ ಸಾಲಿಯಾನ್ ಚೇಳೂರು, ದಿಶಾ ಎಲೆಕ್ಟ್ರಿಕಲ್ ಮಾಲಕರಾದ ಗಣೇಶ್ ಚೇಳೂರು, ವಿಷ್ಣುಮೂರ್ತಿ ದೇವಸ್ಥಾನ ಮಂಜಲ್ಪದೆ ಇದರ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕೃಷ್ಣಶಾಮ್, ಬಿ ಜೆ ಪಿ
ಇರಾ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಸುರೇಶ್ ಬಂಗೇರ ಆರ್ಯ್ಯಾಪು, ಸಜೀಪ ಪಡು-ಚೇಳೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಠ್ಠಲ್ ಅಮೀನ್ ತಲೆಮೊಗರು, ಸಜೀಪ ಮೂಡ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಗಣಪತಿ ಭಟ್, ಸಜೀಪ ನಡು ಪಂಚಾಯತ್ ಸದಸ್ಯರಾದ ಹೇಮಂತ್ ಪೂಜಾರಿ ಮುಳ್ಳಿಂಜ, ಸಜಿಪ ಮೂಡ ಪಂಚಾಯತ್ ಸದಸ್ಯರುಗಳಾದ ಪ್ರಶಾಂತ್ ಪೂಜಾರಿ ಕೋಮಾಲಿ ಮತ್ತು ಶ್ರೀಮತಿ ಶೋಭಾ ಶೆಟ್ಟಿ, ಸಜೀಪ ನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಮುಕ್ತೇಸರರಾದ ವೆಂಕಟೇಶ್ವರ ಭಟ್ ಮುಳ್ಳಿಂಜ, ಹರೀಶ್ ಬಂಗೇರ ಕಾಂತುಕೋಡಿ, ಭಾಸ್ಕರ ಕಂಪದ ಕೋಡಿ, ಭಾಸ್ಕರ ನಾಯಕ್ ಹಾಗೂ ಹಲವಾರು ಪ್ರಮುಖರು ಉಪಸ್ಥಿತರಿದ್ದರು.

IMG 20221011 WA0008 300x138

Related Articles