ಬಿಜೆಪಿ ನಡೆಸಿದ ಇಂಧನ ಬೆಲೆ ಏರಿಕೆ ಮುಷ್ಕರದಲ್ಲಿ ಶಾಸಕರ ಪ್ರತಿಕೃತಿ ದಹನ – ಸಂಪಾಜೆಯಲ್ಲಿ ಕಾಂಗ್ರೆಸ್ ನಿಂದ ಮೌನ ಪ್ರತಿಭಟನೆ…

ಅಭಿವೃದ್ದಿಯ ಪಂಜಿನಿಂದ ಬಿಜೆಪಿ ಗರ ವಿಕೃತ ಮನಸ್ಥಿತಿಯ ಸಾಂಕೇತಿಕ ದಹನ...

ಕೊಡಗು: ವಿರಾಜಪೇಟೆ ಕ್ಷೇತ್ರದ ಶಾಸಕರಾದ ಶ್ರೀ ಎ. ಎಸ್ ಪೊನ್ನಣ್ಣ ರವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಪಕ್ಷದ ವತಿಯಿಂದ ಇಂದು ಸಂಪಾಜೆ ಚೆಕ್ ಪೋಸ್ಟ್ ಬಳಿಯಲ್ಲಿ ಮೌನ ಪ್ರತಿಭಟನೆ ನಡೆಯಿತು.

ಅಭಿವೃದ್ಧಿಯ ಪಂಜನ್ನು ಹಿಡಿದ ಕಾಂಗ್ರೆಸ್ ಪಕ್ಷದ ಹಾಗೂ ಶಾಸಕರ ಅಭಿಮಾನಿಗಳ ಬಳಗ, ಬಿಜೆಪಿಗರು ಮೊನ್ನೆ ಇಂಧನ ಬೆಲೆ ಏರಿಕೆ ಮುಷ್ಕರದಲ್ಲಿ ನಡೆಸಿದ ವಿರಾಜಪೇಟೆ ಕ್ಷೇತ್ರದ ಶಾಸಕರ ಪ್ರತಿಕೃತಿ ದಹನವು ವಿಕೃತ ಹಾಗೂ ಪ್ರಜ್ಞಾಹೀನ ಮನಸ್ಥಿತಿಗೆ ಸಾಕ್ಷಿ ಹಾಗೂ ಇದರಿಂದ ಅವರ ಹೋರಾಟದ ದುರುದ್ದೇಶವು ಬಯಲಾಗಿದೆ ಎಂದು ತಿಳಿಸಲು ಹಾಗೂ ನಾವೆಲ್ಲರು ಪ್ರಜ್ಞಾವಂತರಾಗಿ ಸಾಮಾಜಿಕ ಕಳಕಳಿ ಅರಿತು ಬಾಯಿಗೆ ಕಪ್ಪು-ಪಟ್ಟಿ ಧರಿಸಿ ಮೌನ ಪ್ರತಿಭಟನೆಯನ್ನು ಮಾಡಿ ಅಭಿಮಾನ ಹಾಗೂ ನೈತಿಕ ಹೋರಾಟದ ಸಂದೇಶ ಸಾರುತ್ತಿದ್ದೇವೆ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ರಸ್ತೆ ಮೆರವಣಿಗೆ ಹಮ್ಮಿಕೊಂಡು, ಸಾಂಕೇತಿಕವಾಗಿ ವಿಕೃತ ಮನಸ್ಸಿನ ಪ್ರತಿಕೃತಿ ದಹಿಸಿದರು.
ಈ ಸಂದರ್ಭದಲ್ಲಿ ವಲಯ ಅಧ್ಯಕ್ಷ ಸುರೇಶ್ ಪಿ. ಎಲ್, ಚೆoಬು ಅಧ್ಯಕ್ಷ ರವಿ ಹೊಸೂರ್, ಪೆರಾಜೆ ಅಧ್ಯಕ್ಷ ಜಯರಾಮ್, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ಸಾಮಾಜಿಕ ಜಾಲತಾಣ ಜಿಲ್ಲಾ ಅಧ್ಯಕ್ಷ ಸೂರಜ್ ಹೊಸೂರ್, ಜಿಲ್ಲಾ ಉಪಾಧ್ಯಕ್ಷರು ಸಾಮಾಜಿಕ ಜಾಲತಾಣ ಡಾ.ನಿಶ್ಚಲ್ ದಂಬೆಕೋಡಿ, ಬ್ಲಾಕ್ ಕಾರ್ಯದರ್ಶಿ ಮನು ಪೆರುಮುಂಡ, ಮಾಜಿ ಯುವ ಅಧ್ಯಕ್ಷ ಹನೀಫ್ ಸಂಪಾಜೆ, ಅಕ್ರಮಸಕ್ರಮ ಸದಸ್ಯೆ ತುಳಸಿ, ನಾಪೋಕ್ಲು ಬ್ಲಾಕ್ ಮಹಿಳಾ ಅಧ್ಯಕ್ಷೆ ರಾಜೇಶ್ವರಿ ಕೆ ಕೆ, ಅನುಷ್ಠಾನ ಸಮಿತಿ ಕಾರ್ಯದರ್ಶಿ ಬಷೀರ್, ಮಾಜಿ ಜಿಲ್ಲೆ ಪಂಚಾಯತ್ ಸದಸ್ಯ ಮುಯುದ್ದಿನ್ ಕುoಹಿ, ಗ್ರಾಮಪಂಚಾಯ್ತಿ ಸದಸ್ಯರುಗಳಾದ ಆದಂ , ಕುಸುಮ, ಶಶಿಕಲಾ, ಭುದೇವಿ, ಸ್ಯೆದಾಲವಿ, ನಾಯಕರುಗಳಾದ ತಿರುಮಲ ಸೋನಾ, ಭಾರತಿ ಕುಶಲ ಚೆಂಬು, ಸೋಮಣ್ಣ ಬಾಲಂಬಿ, ಚೆನ್ನಪ್ಪ ಉಗೆಟ್ಟಿ, ಉಮೇಶ್ ನಿಡುಬೆ, ರಿತಿನ್ ಡೆಮ್ಮಲೆ, NSUI ರುನೈಜ್, ರಾಜೇಶ್, ಅಬೂಬಕ್ಕರ್ ಪೆರಾಜೆ, ಶಿಯಾಬ್ ಮತ್ತು ಇತರೆ ಮುಖಂಡರು ಹಾಜರಿದ್ದರು.

Sponsors

Related Articles

Back to top button