ಚಂದ್ರಪ್ರಭಾ ಗೌಡ ಅವರಿಗೆ AIKMCC ವತಿಯಿಂದ ಸನ್ಮಾನ…

ಪುತ್ತೂರು:ಪರ್ಪುಂಜ ಅಪಘಾತದಲ್ಲಿ ಪುಟ್ಟ ಮಗುವಿನ ಚಿಕಿತ್ಸೆಗೆ ಓಡಾಡಿದ ಪುತ್ತೂರಿನ ಶಿಕ್ಷಕಿ ಚಂದ್ರಪ್ರಭಾ ಗೌಡ ರವರಿಗೆ ನ.3 ರಂದು AIKMCC ಹಾಗೂ ಶಿಹಾಬ್ ತಂಙಳ್ ಸೆಂಟರ್ ಫಾರ್ ಹ್ಯುಮಾನಿಟಿ ವತಿಯಿಂದ ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಮಾತನಾಡಿದ ನೋಟರಿ ಎಂ.ಪಿ.ಅಬೂಬಕ್ಕರ್ ಚಂದ್ರಪ್ರಭಾ ಗೌಡ ಅವರ ಮಾನವೀಯ ಸೇವೆಯು ಎಲ್ಲ ಮಹಿಳೆಯರಿಗೆ ಮಾದರಿಯಾಗಲಿ ಎಂದರು.
AIKMCC ಪ್ರಧಾನ ಕಾರ್ಯದರ್ಶಿ ಅಫ್ಹಾಂ ಅಲೀ ತಂಙಳ್ AIKMCC ಪಾಲಿಯೇಟಿವ್ ಹೋಮ್ ಕೇರ್ ವತಿಯಿಂದ ಜಿಲ್ಲೆಯಲ್ಲಿ ನೀಡುತ್ತಿರುವ ರೋಗಿಗಳ ಆರೈಕೆ ವಿವರ ನೀಡಿದರು.
ಕಾರ್ಯಕ್ರಮದಲ್ಲಿ ಯೂಸುಫ್ ಸಾಲ್ಮರ, ಅಬೂಬಕ್ಕರ್, ಭರತ್ ರಾವ್,
ಶರ್ಫ್ಯೂದ್ದೀನ್, ಜಬ್ಬಾರ್ ಕೆಎಂಸಿಸಿ , ಅನೀಸ್ ಕೆ,ಎಸ್, ಮಹಮ್ಮದ್ ಪಡೀಲ್, ಮಹಮ್ಮದ್ ಶಮೀರ್ ಉಪಸ್ಥಿತರಿದ್ದರು.
AIKMCC ದ ಕ ಜಿಲ್ಲಾ ಮೀಡಿಯಾ ವಿಂಗ್ ಕಾರ್ಯದರ್ಶಿ ತಾಜುದ್ದೀನ್ ಟರ್ಲಿ ಸ್ವಾಗತಿಸಿ,ವಂದಿಸಿದರು.

Related Articles

Back to top button