ಶ್ರೀ ವೈದ್ಯನಾಥೇಶ್ವರ ಭಜನಾ ಮಂದಿರದ 15ನೇ ಮಹೋತ್ಸವ…
ಭಜನೆಯಿಂದ ಧಾರ್ಮಿಕ ಜಾಗೃತಿ: ಯೋಗಾನಂದ ಸ್ವಾಮೀಜಿ…
ಮಂಗಳೂರು: ‘ಮಾನಸಿಕ ಶಾಂತಿ ಮತ್ತು ಸಾಮಾಜಿಕ ಐಕ್ಯತೆಗಾಗಿ ಧಾರ್ಮಿಕ ಮನೋಭಾವ ಅವಶ್ಯ. ಮನೆ, ಮಠ – ಮಂದಿರಗಳಲ್ಲಿ ನಡೆಯುವ ಭಜನಾ ಸತ್ಸಂಗದ ಮೂಲಕ ಜನರಲ್ಲಿ ಧರ್ಮ ಜಾಗೃತಿ ಉಂಟಾಗುವುದು’ ಎಂದು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.
ದೇರಳಕಟ್ಟೆ ಬಗಂಬಿಲದ ಶ್ರೀ ವೈದ್ಯನಾಥೇಶ್ವರ ಭಜನಾ ಮಂದಿರದ 15ನೇ ವಾರ್ಷಿಕ ಮಹೋತ್ಸವದ ಧಾರ್ಮಿಕ ಸಭೆ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಕಮಲಾದೇವಿ ಪ್ರಸಾದ ಆಸ್ರಣ್ಣ ಧಾರ್ಮಿಕ ಪ್ರವಚನ ನೀಡಿದರು.
ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶ್ರೀನಿವಾಸ್ ವೈದ್ಯಕೀಯ ಕಾಲೇಜಿನ ಹ್ರದ್ರೋಗ ತಜ್ಞ ಡಾ.ಸುಬ್ರಹ್ಮಣ್ಯಂ ಕೆ., ವಿದ್ಯಾರತ್ನ ವಿದ್ಯಾಸಂಸ್ಥೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಕಂಫರ್ಟ್ ಇನ್ ಮಾಲಕ ಲ|ಚಂದ್ರಹಾಸ ಶೆಟ್ಟಿ, ಅಬ್ಬಕ್ಕ ಪ್ರತಿಷ್ಠಾನದ ಕೋಶಾಧಿಕಾರಿ ಪಿ.ಡಿ.ಶೆಟ್ಟಿ, ಕೋಟೆಕಾರ್ ಪಟ್ಟಣ ಪಂಚಾಯತ್ ಕೌನ್ಸಿಲರ್ ದಿವ್ಯ ಸತೀಶ್ ಶೆಟ್ಟಿ, ಮಾಜಿ ಯೋಧ ಜೆ.ಪಿ.ರೈ ಮುಖ್ಯ ಅತಿಥಿಗಳಾಗಿದ್ದರು
ಶ್ರೀ ವೈದ್ಯನಾಥ ಸೇವಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಅಂಚನ್ ವೈದ್ಯನಾಥನಗರ ಸ್ವಾಗತಿಸಿದರು. ಶೇಖರ್ ಸಾಲಿಯಾನ್ ವಂದಿಸಿದರು. ಸಮಿತಿ ಪ್ರಮುಖರಾದ ಮೋನಪ್ಪ ಗಟ್ಟಿ, ಬಾಲಕೃಷ್ಣ ಶೆಟ್ಟಿ, ಪುಷ್ಪಲತಾ ಬಾಲಕೃಷ್ಣ ಶೆಟ್ಟಿ, ಶ್ವೇತಾ ವಿ., ಸತೀಶ್ ಆಚಾರ್ಯ, ಶ್ರವಣ್ ಕುಮಾರ್, ಕೃಷ್ಣ ನಾಯಕ್, ಶಾಲಿನಿ ನಾಗರಾಜ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.