ಸುಳ್ಯ ಹವ್ಯಕ ವಲಯದ ಅಕ್ಟೋಬರ್ ತಿಂಗಳ ಶಾಸನತಂತ್ರ ಸಭೆ…

ಸುಳ್ಯ: ಸುಳ್ಯ ಹವ್ಯಕ ವಲಯದ ನೂತನ ನಿಯುಕ್ತ ಪದಾಧಿಕಾರಿಗಳ ಪ್ರಥಮ ಸಭೆಯು ಸರಳಿ ಕುಂಜದ ಧರ್ಮಾರಣ್ಯ ದಲ್ಲಿ ಅ.6ರಂದು ವಲಯದ ಅಧ್ಯಕ್ಷರಾದ ಈಶ್ವರ ಕುಮಾರ್ ಉಬರಡ್ಕ ಇವರ ನೇತೃತ್ವದಲ್ಲಿ ನಡೆಯಿತು. ದೀಪ ಜ್ವಲನ ಧ್ವಜಾರೋಹಣ ಶಂಖನಾದ ಗುರುವಂದನೆ ಗೋ ಸ್ತುತಿಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು.
ವಲಯದ ಕಾರ್ಯದರ್ಶಿ ವಿಷ್ಣು ಕಿರಣ ನೀರಬಿದಿರೆ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿ ಗತ ಸಭೆಯ ವರದಿ ನೀಡಿ ಸಭಾ ನಿರ್ವಹಣೆ ಮಾಡಿದರು.ಬಳಿಕ ಕಾರ್ಯದರ್ಶಿಗಳಿಂದ ಸಂಘಟನೆಯ ಕಾರ್ಯಸೂಚಿ ವಿಷಯ ಮಂಡನೆಯಾಗಿ ಮಂಡಲದ ಸುತ್ತೋಲೆಗಳ ಬಗ್ಗೆ ವಿವರಣೆ ಸಮಾಲೋಚನೆ ನಡೆಯಿತು. ಘಟಕಗಳ ಮುಖ್ಯಸ್ಥರಾದ ಗುರಿಕ್ಕಾರು ಘಟಕವಾರು ವರದಿ ಮಂಡಿಸಿದರು. ನೂತನ ಪದಾಧಿಕಾರಿಗಳು ವಿಭಾಗವಾರು ವರದಿ ಮಂಡಿಸಿದರು.
ಗೋಕರ್ಣದ ಅಶೋಕೆಯಲ್ಲಿ ಸ್ಥಾಪಿತ ಗೊಳ್ಳಲಿರುವ ವಿಷ್ಣುಗುಪ್ತ ವಿದ್ಯಾಪೀಠದ ಕುರಿತು ಪ್ರೋ. ಶ್ರೀಕೃಷ್ಣ ಭಟ್ ಇವರು ಸಮಗ್ರ ಮಾಹಿತಿಗಳನ್ನು ಪ್ರಸ್ತುತಪಡಿಸಿದರು.ಇದೇ ಸಂದರ್ಭದಲ್ಲಿ ಶ್ರೀಮತಿ ಸಂಧ್ಯಾ ಕುಮಾರ್ ಅವರ ಸ್ವರಚಿತ ಕವನ ಸಂಕಲನ ಉಷಾಕಿರಣದ ಬಿಡುಗಡೆ ಸಮಾರಂಭವು ನಡೆಯಿತು. ರಾಮ ತಾರಕ ಜಪ, ಶಾಂತಿ ಮಂತ್ರ, ಧ್ವಜಅವರೋಹಣ ಶಂಖನಾದವಾಗಿ ಸಭೆಯು ಮುಕ್ತಾಯವಾಯಿತು.

IMG 20191006 WA0032 300x225

Related Articles

Leave a Reply

Your email address will not be published. Required fields are marked *