ಮೀಫ್ ಶೈಕ್ಷಣಿಕ ಸಂಸ್ಥೆಗಳ ಒಕ್ಕೂಟ ದ ಉಪಾಧ್ಯಕ್ಷರಾಗಿ ಕೆ. ಎಂ. ಮುಸ್ತಫ ಪುನರಾಯ್ಕೆ…

ಮಂಗಳೂರುದಕ್ಷಿಣ ಕನ್ನಡ, ಉಡುಪಿ ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಮುಸ್ಲಿಂ ಶೈಕ್ಷಣಿಕ ಸಂಸ್ಥೆಗಳ ಒಕ್ಕೂಟ ದ 2025- 2027 ನೇ ಸಾಲಿನ ಹಿರಿಯ ಉಪಾಧ್ಯಕ್ಷರಾಗಿ ಕೆ. ಎಂ. ಮುಸ್ತಫ ಸುಳ್ಯ ಪುನರಾಯ್ಕೆ ಗೊಂಡಿರುತ್ತಾರೆ
ಮಂಗಳೂರು ಪಡೀಲ್ ನಲ್ಲಿರುವ ಬರಖಾ ಸಭಾಂ ಗಣದಲ್ಲಿ ಜರಗಿದ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.
ಗೌರವಾಧ್ಯಕ್ಷ ಉಮ್ಮರ್ ಟೀಕೇ ಯವರ ಅಧ್ಯಕ್ಷತೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು
ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಇದರ ಅಧ್ಯಕ್ಷ ರಾಗಿರುವ ಮುಸ್ತಫ ರವರು ಗಾಂಧಿನಗರ ಜುಮ್ಮಾಮಸ್ಜಿದ್ ಮಾಜಿ ಅಧ್ಯಕ್ಷ ರಾಗಿ, ಇಂಡಿಯನ್ ರೆಡ್ ಕ್ರಾಸ್ ಸುಳ್ಯ ಘಟಕ ಉಪ ಸಭಾಪತಿ ಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

whatsapp image 2025 07 11 at 8.25.02 pm (1)

Sponsors

Related Articles

Back to top button