ನಾಡ ಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ನಿತ್ಯಾನಂದ ಮುಂಡೋಡಿ ಯವರಿಗೆ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿ ಗಳಿಂದ ಗೌರವ ಸಮ್ಮಾನ…

ಸುಳ್ಯ: ಸುಳ್ಯ ಟಿ ಎ ಪಿ ಸಿ ಎಂ ಎಸ್ ಅಧ್ಯಕ್ಷ, ಸುಳ್ಯ ಗೌಡ ಯುವ ಸೇವಾ ಸಂಘದ ಮತ್ತು ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ನ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ, ಸಹಕಾರಿ, ಧಾರ್ಮಿಕ, ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ ನಿತ್ಯಾನಂದ ಮುಂಡೋಡಿ ಯವರು ಪ್ರತಿಷ್ಠಿತ ನಾಡಪ್ರಭು ಕೆಂಪೇ ಗೌಡ ಪ್ರಶಸ್ತಿ ಗೆ ಭಾಜನರಾದ ಸಂದರ್ಭದಲ್ಲಿ ಸುಳ್ಯ ವಿವಿಧ ಸಂಘ ಸಂಸ್ಥೆ ಗಳ ಪ್ರತಿನಿಧಿಗಳು ಸನ್ಮಾನಿಸಿದರು.
ಸನ್ಮಾನ ನೆರವೇರಿಸಿ ಮಾತನಾಡಿದ ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ ಸರ್ವ ಧರ್ಮ ದವರಿಂದಲೂ, ಸರ್ವ ಪಕ್ಷ ದವರಿಂದಲೂ ಗೌರವಿಸಲ್ಪಡುವ ನಿತ್ಯಾನಂದ ಮುಂಡೋಡಿ ಯವರು ಅಲಂಕರಿಸಿದ ಎಲ್ಲಾ ಸ್ಥಾನ ಗಳಿಗೂ ನ್ಯಾಯ ಒದಗಿಸಿದವರು, ಮುಂಡೋಡಿ ಮುನ್ನಡೆಸಿದ ಪಕ್ಷದ ಹುದ್ದೆ, ಸಹಕಾರಿ ಧಾರ್ಮಿಕ ಸಂಸ್ಥೆಗಳು, ಸಾಮಾಜಿಕ ಸಂಘಟನೆಗಳು ಅಭಿವೃದ್ಧಿಯತ್ತ ಸಾಗಿರುವುದು ಎಲ್ಲರನ್ನು ಒಟ್ಟಾಗಿಸುವ ಅವರ ಸದ್ಗುಣ ಗಳಿಗೆ ಸಾಕ್ಷಿ ಎಂದರು. ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ನಿರ್ದೇಶಕ ಶಾಫಿ ಕುತ್ತಾಮೊಟ್ಟೆ, ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ನಿರ್ದೇಶಕ ಕೆ. ಬಿ. ಇಬ್ರಾಹಿಂ, ಕೆಪೆಕ್ ರಾಜ್ಯ ನಿಗಮದ ಮಾಜಿ ನಿರ್ದೇಶಕ ಪಿ. ಎ. ಮಹಮ್ಮದ್, ಮಲೆನಾಡು ಚಾರಿಟೇಬಲ್ ಅಧ್ಯಕ್ಷ, ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕ್ಕಾರ್ಸ್, ಮುಖಂಡರುಗಳಾದ ಭರತ್ ಮುಂಡೋಡಿ,ಪಿ. ಸಿ. ಜಯರಾಮ್, ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಅಧ್ಯಕ್ಷ ಕೆ. ಸಿ. ಸದಾನಂದ,ದಿನೇಶ್ ಮಡಪ್ಪಾಡಿ ಪಿ. ಎಸ್. ಗಂಗಾಧರ್, ಸುಪ್ರೀತ್ ಮೊಂಟಡ್ಕ, ಮತ್ತು ನಿತ್ಯಾನಂದ ಮುಂಡೋಡಿ ಯವರ ಕುಟುಂಬಸ್ಥರು ಮೊದಲಾದವರು ಉಪಸ್ಥಿತರಿದ್ದರು.

Sponsors

Related Articles

Back to top button