ಬೆಂಕಿಗೆ ಅಹುತಿಯಾದ ಅರಂತೋಡು ಗ್ರಾ ಪಂ ಘನ ತ್ಯಾಜ್ಯ ನಿರ್ವಹಣಾ ಘಟಕ ಸ್ಥಳಕ್ಕೆ ಸುಳ್ಯ ಕಾಂಗ್ರೆಸ್ ನಿಯೋಗ ಭೇಟಿ…

ಸುಳ್ಯ:ಬೆಂಕಿ ಅವಘಡ ಸಂಭವಿಸಿದ ಅರಂತೋಡು ಗ್ರಾಮ ಪಂಚಾಯತ್ ಘನ ತ್ಯಾಜ್ಯ ಘಟಕಕ್ಕೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಸಿ ಜಯರಾಮ್, ಕಾರ್ಯದರ್ಶಿ ಪಿ. ಎಸ್ ಗಂಗಾಧರ್, ಸುಳ್ಯ ನಗರ ಪ್ರಾಧಿಕಾರದ ಅಧ್ಯಕ್ಷ ಕೆ. ಎಂ ಮುಸ್ತಪಾರವರು ಜು. 14 ರಂದು ಭೇಟಿ ನೀಡಿದರು.
ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಘಟನೆ ಬಗ್ಗೆ ವಿವರಿಸಿ ಸುಮಾರು 60ಲಕ್ಷ ನಷ್ಟ ಸಂಭವಿಸಿದೆ ಎಂದರು. ಈ ಸಂದರ್ಭದಲ್ಲಿ ಪಿ. ಸಿ ಜಯರಾಮ್ ಮಾತನಾಡಿ ಘಟನೆ ಬಗ್ಗೆ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಅನುದಾನ ಬಿಡುಗಡೆ ಮಾಡಲು ಪ್ರಯತ್ನಿಸುದಾಗಿ ಭರವಸೆ ನೀಡಿದ್ದರು. ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ, ಅರಂತೋಡು ಗ್ರಾಮ ಪಂಚಾಯತ್ ಸದಸ್ಯರಾದ ರವೀಂದ್ರ ಪೂಜಾರಿ, ಶಶಿಧರ ತೊಡಿಕಾನ, ಕೆಡಿಪಿ ಸದಸ್ಯ ಅಶ್ರಫ್ ಗುಂಡಿ, ಅರಂತೋಡು ಮೆಸ್ಕಾಂ ಸಲಹಾ ಸಮಿತಿ ಸದಸ್ಯ ತಾಜುದ್ದೀನ್ ಅರಂತೋಡು, ಅಮಿರ್ ಕುಕ್ಕುಂಬಳ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.