ಸುದ್ದಿ

ಗಣೇಶ್ ಟೈಲರ್ ನಿಧನಕ್ಕೆ ಕಾಂಗ್ರೆಸ್ ಮುಖಂಡರ ಸಂತಾಪ…

ಸುಳ್ಯ: ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಸುಳ್ಯದಲ್ಲಿ ಟೈಲರಿಂಗ್ ವೃತ್ತಿಮಾಡಿ ಸಾರ್ವಜನಿಕರೊಂದಿಗೆ ಸಕ್ರಿಯವಾಗಿ ಬೆರೆತು ಸಮಾಜ ಸೇವೆ ಮಾಡುತ್ತಿದ್ದ ಹಾಗೂ ಅಕಾಲಿಕ ಮರಣ ಹೊಂದಿದ ತೊಡಿಕಾನ ಗ್ರಾಮದ ಅಡ್ಯಡ್ಕ ಗಣೇಶ್ ಟೈಲರ್ ಅವರ ಮನೆಗೆ ಕಾಂಗ್ರೆಸ್ ಮುಖಂಡರು ಭೇಟಿ ನೀಡಿ ಅಂತಿಮ ವಿಧಿ ವಿಧಾನಗಳಲ್ಲಿ ಪಾಲ್ಗೊಂಡರು.
ಕಾಂಗ್ರೆಸ್ ಮುಖಂಡರಾದ ಟಿ ಎಂ ಶಾಹೀದ್ ತೆಕ್ಕಿಲ್, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ, ಮಾಜಿ ಅಧ್ಯಕ್ಷರಾದ ಸದಸ್ಯ ಜಗದೀಶ ರೈ, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ರಹೀಮ್ ಬೀಜದಕಟ್ಟೆ, ಕಾಂಗ್ರೆಸ್ ಕಾರ್ಯಕರ್ತ ಉನೈಸ್ ಗೂನಡ್ಕ ಮೊದಲಾದವರು ಮೃತರ ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದು ಅಂತಿಮ ವಿಧಿ ವಿಧಾನಗಳಲ್ಲಿ ಪಾಲ್ಗೊಂಡು, ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಸದ್ರಿಯವರ ನಿಧನದಿಂದ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಟಿ ಎಂ ಶಾಹೀದ್ ತೆಕ್ಕಿಲ್ ಸಂತಾಪ ತಿಳಿಸಿದ್ದಾರೆ.

 

Advertisement

Related Articles

Back to top button