ತುಂಬೆ ಡ್ಯಾಮ್ ನೀರು ಸಂಗ್ರಹ – ರೈತರಿಗೆ ನ್ಯಾಯೋಚಿತ ಪರಿಹಾರಕ್ಕಾಗಿ ಮನವಿ…

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಇತ್ತೀಚೆಗೆ ದೃಶ್ಯ ಮಾಧ್ಯಮದ ಮೂಲಕ ಮಂಗಳೂರಿಗೆ ಕುಡಿಯುವ ನೀರಿನ ಸಲುವಾಗಿ ನೇತ್ರಾವತಿಯಲ್ಲಿ 6.50 ಮೀಟರ್ ನೀರು ಸಂಗ್ರಹಿಸಲಾಗಿದ್ದು ಈ ಬಾರಿ ನೀರಿನ ಕೊರತೆ ಆಗದು ಎಂಬುದಾಗಿ ತಿಳಿಸಿರುತ್ತಾರೆ. ಜಿಲ್ಲಾಡಳಿತ ನೀರು ಸಂಗ್ರಹದ ನಿಮಿತ್ತ ಸಂತ್ರಸ್ತ ರೈತರಿಗೆ 6 ಮೀಟರ್ ಗೆ ಭೂ ಪರಿಹಾರ ಒದಗಿಸಿದ್ದು, ಎಲ್ಲಾ ರೈತರಿಗೆ ಇನ್ನೂ ದೊರೆತಿರುವುದಿಲ್ಲ. ಪ್ರಸ್ತುತ ಆರುವರೆ ಮೀಟರ್ ಗೆ ನೀರು ಸಂಗ್ರಹಿಸಿದ್ದು ಕೇಂದ್ರ ಜಲ ಆಯೋಗದ ನಿರ್ದೇಶನದಂತೆ ವರತೆ ಪ್ರದೇಶ ಸೇರಿಸಿ ನೀರು ಸಂಗ್ರಹಕ್ಕೆ1 ಮೀಟರ್ ಹೆಚ್ಚುರಿಯಾಗಿ ಅಂದರೆ ಏಳುವರೆ ಮೀಟರ್ ಗೆ ರೈತರ ಸಮಕ್ಷಮ ಸರ್ವೇ ಮಾಡಿ ರೈತರಿಗೆ ನ್ಯಾಯೋಚಿತ ಸೂಕ್ತ ಪರಿಹಾರ ಜಿಲ್ಲಾ ಆಡಳಿತದ ಮೂಲಕ ಒದಗಿಸಿಕೊಡುವಂತೆ ಸಜಿಪ ಮುನ್ನೂರು ಗ್ರಾಮ ಪಂಚಾಯಿತಿ ಪಿಡಿಒ ಲಕ್ಷ್ಮಣ್ ಮೂಲಕ ಲಿಖಿತ ಮನವಿ ಬಂಟ್ವಾಳ ತಾಲೂಕು ರೈತ ಸಂಘ ಅಧ್ಯಕ್ಷ ಎo ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಸಲ್ಲಿಸಲಾಯಿತು.

ರೈತರ ನಿಯೋಗದಲ್ಲಿ ಎನ್ ಕೆ ಇದಿನಬ್ಬ, ಅಬ್ದುಲ್ ಖಾದರ್, ಎನ್ ರಾಮ ಹುಸೇನಾರ್, ಬಿ ಅಣ್ಣಪ್ಪಯ್ಯ, ಅಬ್ಬಾಸ್ ಮೊದಲಾದವರು ಜೊತೆಗಿದ್ದರು.

Sponsors

Related Articles

Back to top button