ಸುದ್ದಿ

ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನ ಶಾಫಿ ಸಅದಿಗೆ ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ವತಿಯಿಂದ ಸನ್ಮಾನ…

ಅಬುಧಾಬಿ: ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರಾಗಿ ಮೊದಲ ಬಾರಿ ಯುಎಇ ಗೆ ಆಗಮಿಸಿದ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರಾದ ಮೌಲಾನ ಶಾಫಿ ಸಅದಿ ಉಸ್ತಾದರಿಗೆ ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ವತಿಯಿಂದ ಅಬುಧಾಬಿ ಏರ್ಪೋರ್ಟ್ ರಸ್ತೆಯಲ್ಲಿರುವ ನಾಸರ್ ಪಾರ್ಟಿ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ವೇದಿಕೆಯಲ್ಲಿ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯ ಜನಾಬ್ ಹಮೀದ್ ಸಅದಿ, ಹಮೀದ್ ಈಶ್ವರಮಂಗಿಳ, ಕೆಸಿಎಫ್ ಯುಎಇ ಸಮಿತಿ ಅದ್ಯಕ್ಷರಾದ ಕೆದುಂಬಾಡಿ ಇಬ್ರಾಹಿಂ ಸಖಾಫಿ , ಪ್ರ ಕಾರ್ಯದರ್ಶಿ ಹಾಜಿ ಮೂಸ ಬಸರ , ನಿಕಟ ಪೂರ್ವ ಅಧ್ಯಕ್ಷರಾದ ಜಲೀಲ್ ನಿಝಾಮಿ ಹಾಗೂ ಇತರ ರಾಷ್ಟ್ರಿಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Advertisement

Related Articles

Back to top button