ಎಂ.ಶೆಲ್ವಿ ಬಾಲಕೃಷ್ಣನ್ – ಕರ್ನಾಟಕ ಮುಕುಟಮಣಿ ಪ್ರಶಸ್ತಿಗೆ ಆಯ್ಕೆ…

ಬೆಂಗಳೂರು: ಕ್ರೈಸ್ಟ್ ನಗರದ ಹುಲ್ಲಹಳ್ಳಿ ತಾಲ್ಲೂಕಿನ ಬೇಗೂರು ಕೊಪ್ಪದ ಕ್ರೈಸ್ಟ್ ಅಕಾಡೆಮಿ ಇನ್ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ ಸ್ಟಡೀಸ್ ನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ ಸೇವೆಯನ್ನು ಸಲ್ಲಿಸುತ್ತಿರುವ ಎಂ. ಶೆಲ್ವಿ ಬಾಲಕೃಷ್ಣನ್ ಅವರು “ಕರ್ನಾಟಕ ಮುಕುಟಮಣಿ” ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶೆಲ್ವಿ ಅವರು ಬಾಲ್ಯದಿಂದಲೇ ಕವನ,ಕಥೆ, ಹಾಗೂ ಅನೇಕ ಸಾಹಿತ್ಯ ರಚನೆ ಮಾಡುವುದರಲ್ಲಿ ಅಭಿರುಚಿ ಹೊಂದಿದ್ದಾರೆ. ಇವರ ವಿವಿಧ ಬಗೆಯ ಸೇವೆಯನ್ನು ಗುರುತಿಸಿ ಸಂಘಟನೆಗಳು ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿಗಳನ್ನು ಕೊಟ್ಟು ಗೌರವಿಸಿದ್ದಾರೆ.
ಅದೇ ರೀತಿ ೬೯ನೇ ವರ್ಷದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ನಾಡು, ನುಡಿ, ಕಲೆ,ಸಾಹಿತ್ಯ,ಸಂಗೀತ,ಸಂಸ್ಕೃತಿ,ಜಾನಪದ,ಸಮಾಜಸೇವೆ,ಸಂಘಟನೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಶೆಲ್ವಿ ಅವರಿಗೆ ದಿನಾಂಕ ೦೧ ಡಿಸೆಂಬರ್ ೨೦೨೪ ರಂದು ಭಾನುವಾರ ದಾವಣಗೆರೆ ರೈಲ್ವೆ ನಿಲ್ದಾಣದ ರಸ್ತೆಯಲ್ಲಿರುವ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ವಿಜೃಂಭಣೆಯಿಂದ ಕರ್ನಾಟಕ ಮುಕುಟಮಣಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು ಎಂದು ಸಂಸ್ಥೆಯ ಸಾಲಿಗ್ರಾಮ ಗಣೇಶ ಶಣೈ ಅವರು ತಿಳಿಸಿದ್ದಾರೆ.