ದ.ಕ – ಇಂದು ಮತ್ತಿಬ್ಬರಲ್ಲಿ ಕೊರೊನಾ ಪಾಸಿಟಿವ್…

ಮಂಗಳೂರು: ಬಂಟ್ವಾಳದ 69 ವರ್ಷದ ವೃದ್ಧ ಮತ್ತು ಬೋಳೂರು ಗ್ರಾಮದ 62 ವರ್ಷದ ವೃದ್ಧನಿಗೆ ಕೊರೊನಾ ಸೋಂಕು ತಗುಲಿರುವುದು ಇಂದು ದೃಢವಾಗಿದೆ.
ಬಂಟ್ವಾಳದ 69 ವರ್ಷದ ವೃದ್ಧನಿಗೆ ಸೋಂಕಿತ ಸಂಖ್ಯೆ 390ರ ಸಂಪರ್ಕದಿಂದ ಸೋಂಕು ತಾಗಿದೆ. ಏಪ್ರಿಲ್ 19ರಂದು ಕೋವಿಡ್-19 ಸೋಂಕಿಗೆ ಬಲಿಯಾದ ಮಹಿಳೆಯ ಸಂಬಂಧಿಯಾಗಿರುವ ಇವರು ಸಾವನ್ನಪ್ಪಿದ ಮಹಿಳೆಯ ನೆರೆಮನೆಯಲ್ಲಿ ವಾಸವಿದ್ದರು.
ಮತ್ತೋರ್ವ ಸೋಂಕಿತ 62 ವರ್ಷದ ಪುರುಷ ಮಂಗಳೂರಿನ ನಿವಾಸಿ. ಗುರುವಾರ ಕೋವಿಡ್-19 ಪಾಸಿಟಿವ್ ಆಗಿದ್ದ ಮಹಿಳೆಯ ( p-536)ರ ಪತಿಯಾಗಿರುವ ಇವರಿಗೂ ಇಂದು ಸೋಂಕು ದೃಢವಾಗಿದೆ.ಇವರಿಬ್ಬರನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ.