ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು, ಕ್ಯಾಡ್‍ಮ್ಯಾಕ್ಸ್ ಸೊಲ್ಯುಶನ್ಸ್ ಎಜುಕೇಶನ್ ಟ್ರಸ್ಟ್ – MOU…

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗ ಮತ್ತು ಬೆಂಗಳೂರಿನ ಕ್ಯಾಡ್‍ಮ್ಯಾಕ್ಸ್ ಸೊಲ್ಯುಶನ್ಸ್ ಎಜುಕೇಶನ್ ಟ್ರಸ್ಟ್ ಇದರ ನಡುವೆ ಶೈಕ್ಷಣಿಕ ಮತ್ತು ಔದ್ಯಮಿಕ ವಿಷಯಗಳ ವಿನಿಮಯದ ಬಗ್ಗೆ ತಿಳುವಳಿಕೆ ಒಪ್ಪಂದಕ್ಕೆ (MOU) ಸಹಿ ಹಾಕಲಾಯಿತು.
ಎಂಜಿನಿಯರಿಂಗ್ ಕೋರ್ಸನ್ನು ಮುಗಿಸಿ ಹೊರಬರುವ ವಿದ್ಯಾರ್ಥಿಗಳನ್ನು ಪ್ರಸಕ್ತ ಸನ್ನಿವೇಶಕ್ಕೆ ತಕ್ಕಂತೆ ತರಬೇತುಗೊಳಿಸಿ ಉದ್ಯೋಗಕ್ಕೆ ಮತ್ತು ಉದ್ಯಮಕ್ಕೆ ಸಿದ್ದರಾಗುವಂತೆ ಮಾಡುವ ಮಹತ್ವಾಕಾಂಕ್ಷಿ ಯೋಜನೆಯೊಂದಿಗೆ ಈ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ನೂತನ ಕೌಶಲ್ಯಗಳ ಮಾಹಿತಿ, ಪ್ರಾಯೋಗಿಕ ತರಬೇತಿ, ವೆಬಿನಾರ್‍ಗಳು, ಸೆಮಿನಾರ್ ಗಳು , ಪರಿಣತರಿಂದ ಅತಿಥಿ ಉಪನ್ಯಾಸಗಳು, ಕಾರ್ಯಾಗಾರಗಳು, ಉಪನ್ಯಾಸಕರ ತರಬೇತಿ ಕಾರ್ಯಕ್ರಮಗಳು, ಇಂಟರ್ನ್‍ಶಿಪ್, ಪ್ರಾಜೆಕ್ಟ್‍ವರ್ಕ್ ಮತ್ತು ಉತ್ಪನ್ನ ಹಾಗೂ ಉದ್ಯಮ ಜಾಗೃತಿ ಕಾರ್ಯಗಳಲ್ಲಿ ಪರಸ್ಪರ ಸಹಭಾಗಿತ್ವವನ್ನು ನೀಡುವ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ಮನುಜೇಶ್.ಬಿ.ಜೆ ಮತ್ತು ಕ್ಯಾಡ್‍ಮ್ಯಾಕ್ಸ್ ಸೊಲ್ಯುಶನ್ಸ್ ಎಜುಕೇಶನ್ ಟ್ರಸ್ಟ್‍ನ ತರಬೇತಿ ಮತ್ತು ಕೌಶಲ ಅಭಿವೃದ್ದಿ ವಿಭಾಗದ ಪ್ರಧಾನ ವ್ಯವಸ್ಥಾಪಕ ಅಶ್ವಿನ್ ಆರ್.ಎಸ್ ಒಪ್ಪಂದಕ್ಕೆ ಸಹಿ ಹಾಕಿದರು. ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ, ಸಹಾಯಕ ಪ್ರಾಧ್ಯಾಪಕ ಪ್ರೊ.ರಾಘವೇಂದ್ರ ಪ್ರಸಾದ್ ಎಸ್.ಎ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.