ಉಚಿತ ನೇತ್ರ ಚಿಕಿತ್ಸಾ ಶಿಬಿರದ ಉದ್ಘಾಟನೆ…

ಬಂಟ್ವಾಳ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಧತ್ವ ವಿಭಾಗ ಮಂಗಳೂರು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಮಾಣಿ ಇದರ ವತಿಯಿಂದ ಅನಂತಾಡಿ ಗ್ರಾಮ ಪಂಚಾಯತ್ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವು ಹಿರಿಯ ಪ್ರಾಥಮಿಕ ಶಾಲೆ ಬಾಬನಕಟ್ಟೆಯಲ್ಲಿ ಜು. 30 ರಂದು ಜರಗಿತು.
60 ಕ್ಕೂ ಹೆಚ್ಚು ಮಂದಿ ನೇತ್ರ ಪರೀಕ್ಷೆ ನಡೆಸಿದರು. ಅವಶ್ಯಕತೆಯಿದ್ದವರಿಗೆ ಶಸ್ತ್ರಚಿಕಿತ್ಸೆಯ ವ್ಯವಸ್ಥೆಯನ್ನು ಪ್ರಸಾದ್ ನೇತ್ರಾಲಯ ಮಂಗಳೂರಿನಲ್ಲಿ ಮಾಡಲಾಯಿತು.
ಶಿಬಿರವನ್ನು ಕನಾಟಕ ವಿದ್ಯಾವರ್ಧಕ ಸಂಘ ಮಾಣಿ ಇದರ ಅಧ್ಯಕ್ಷ ರೋ. ಕಿರಣ್ ಹೆಗ್ಡೆ ಉದ್ಘಾಟಿಸಿದರು. ಮಾಣಿ ಲಯನ್ಸ್ ಕ್ಲಬ್ ಅಧ್ಯಕ್ಷ ಕೂಸಪ್ಪ ಪೂಜಾರಿ ಮುಖ್ಯ ಅತಿಥಿಯಾಗಿದ್ದರು. ಗ್ರಾ.ಪಂ ಅಧ್ಯಕ್ಷ ಗಣೇಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ನೇತ್ರಾವತಿ ಸಂಗಮದ ಸ್ಥಾಪಕಾಧ್ಯಕ್ಷ ಸೀನಿಯರ್ ಜಯಾನಂದ ಪೆರಾಜೆ, ವೇದಿಕೆಯಲ್ಲಿ ಡಾ. ನಿಶ್ಚಿತ್ ಶೆಟ್ಟಿ ಉಪಸ್ಥಿತರಿದ್ದರು. ಶಿಬಿರದ ನಿರ್ದೇಶಕ ಡಾ. ಎ. ಮನೋಹರ್ ರೈ ಸ್ವಾಗತಿಸಿದರು. ಲಯನ್ಸ್ ಪೂರ್ವಾಧ್ಯಕ್ಷ ಉಮೇಶ್ ನಿರೂಪಿಸಿದರು. ಸಂಯೋಜಕ ಮುರಳೀಧರ ಸಿ.ಹೆಚ್ ವಂದಿಸಿದರು. ಸ್ಥಳೀಯ ಸಂಘ ಸಂಸ್ಥೆಗಳ ಮುಖ್ಯಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

photo 2
Sponsors

Related Articles

Back to top button