ಸುಳ್ಯ ರೋಟರಿ ಕ್ಲಬ್ ವತಿಯಿಂದ ಸರಕಾರಿ ಆಸ್ಪತ್ರೆಗೆ ಉದ್ಯಾನವನ ಹಾಗೂ ಟಿ.ವಿ. ಹಸ್ತಾಂತರ….

ಸುಳ್ಯ:ರೋಟರಿ ಸುಳ್ಯ ಇದರ ಸುಳ್ಯ ಸರಕಾರಿ ಆಸ್ಪತ್ರೆ ಮುಂಭಾಗ ಅತ್ಯಂತ ಆಕರ್ಷಕವಾದ ಉದ್ಯಾನವನ ಹಾಗೂ ಡಯಾಲಿಸಿಸ್ ವಾರ್ಡಿಗೆ ದೂರದರ್ಶನವನ್ನು ಜಿಲ್ಲಾ ಗವರ್ನರ್ ಜೋಸೆಫ್ ಮಾಥ್ಯೂ ರವರು ಹಸ್ತಾಂತರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಡಾ. ಪುರುಷೋತ್ತಮ ಕೆ.ಜಿ. ವಹಿಸಿದ್ದರು. ಈ ಸಂದರ್ಭದಲ್ಲಿ ವಲಯ 5ರ ಅಸಿಸ್ಟೆಂಟ್ ಗವರ್ನರ್ ಡಾ. ಕೇಶವ ಪಿ.ಕೆ., ವೈದ್ಯಾಧಿಕಾರಿ ಡಾ. ಭಾನುಮತಿ, ಡಾ. ಹಿಮಕರ, ಹಿರಿಯ ರೋಟರಿಯನ್‍ಗಳಾದ ರಾಮಚಂದ್ರ, ಗಣೇಶ್ ಶರ್ಮ, ಮದುಸೂಧನ್ ಕುಂಬಕ್ಕೋಡ್, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಡಾ. ಹರ್ಷಿತಾ ಪುರುಷೋತ್ತಮ್, ರೋಟರಿ ಶಾಲಾ ಸಂಚಾಲಕ ಜಿತೇಂದ್ರ, ದಯಾನಂದ ಆಳ್ವ, ಹಾಗೂ ರೋಟರಿ ಹಾಗೂ ಇನ್ನರ್ ವೀಲ್ ಸದಸ್ಯರು ಉಪಸ್ಥಿತರಿದ್ದರು. ಉದ್ಯಾನವನವನ್ನು ಮಧುಸೂಧನ ಕುಂಬಕ್ಕೋಡ್ ಹಾಗೂ ಲತಾ ಮಧುಸೂಧನ್ ಇವರು ಕೊಡುಗೆಯಾಗಿ ನೀಡಿರುತ್ತಾರೆ. ದೂರದರ್ಶನವನ್ನು ರೋಟರಿ ಹಾಗೂ ಇನ್ನರ್ ವೀಲ್ ಕ್ಲಬ್ ಜಂಟಿಯಾಗಿ ನೀಡಿರುತ್ತಾರೆ.