ಶ್ರೀರಾಮ ಪದವಿ ಕಾಲೇಜಿಗೆ ವಿದೇಶಿ ಗಣ್ಯರ ಭೇಟಿ….
ಬಂಟ್ವಾಳ: ಶ್ರೀರಾಮ ಪದವಿ ಕಾಲೇಜಿಗೆ ಫ್ರಾನ್ಸ್ ನ ಅಂತರಾಷ್ಟ್ರೀಯ ರೇಡಿಯೋ ಇದರ ಭಾರತೀಯ ವರದಿಗಾರರಾದ ಸೆಬೆಸ್ಟಿಯನ್ ಫಾರ್ಸಿಸ್ ಇವರು ಭಾರತೀಯ ಸಂಸ್ಕೃತಿ ಮತ್ತು ಶಿಕ್ಷಣದ ವೈಶಿಷ್ಟ್ಯತೆಯ ಕುರಿತು ಪದವಿ ವಿದ್ಯಾರ್ಥಿಗಳ ಜೊತೆಗೆ ಸಂವಾದ ಕಾರ್ಯಕ್ರಮ ನಡೆಸಿದರು.
ಈ ಸಂದರ್ಭದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಯಾಜಿ ಹಾಗೂ ಬೆಂಗಳೂರಿನ ಅಶೋಕ್ ಜಿ ಎಸ್ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕಿಯಾದ ವಿದ್ಯಾಶ್ರೀ ಎನ್ ನಿರೂಪಿಸಿ, ವಂದಿಸಿದರು.