ಕಾರಿಗೆ ಸೈಡ್ ಕೊಡೋ ವಿಚಾರಕ್ಕೆ ರಸ್ತೆಯಲ್ಲೇ ಸಿನೆಮಾ ನಟಿಯಿಂದ ಫೈಟ್ …

ಬಂಟ್ವಾಳ : ಕಾರಿಗೆ ಸೈಡ್ ಕೊಡೋ ವಿಚಾರಕ್ಕೆ ನಟಿ ಹಾಗೂ ಇನ್ನೊಂದು ಕಾರಿನವರ ನಡುವೆ ರಸ್ತೆಯಲ್ಲಿ ಸಿನೆಮಾ ಮಾದರಿ ಹೊಡೆದಾಟ ನಡೆದಿದ್ದು, ಹೊಡೆದಾಟದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರುವಾಯಿ ಬಳಿ ಈ ಘಟನೆ ನಡೆದಿದೆ. ಕಾರಿನಲ್ಲಿ ನಾಯಕ ನಟನೊಂದಿಗೆ ಹೋಗುತ್ತಿದ್ದ ನಟಿ ಶೋಭಿತ ಮತ್ತು ಮತ್ತೊಂದು ಕಾರಿನವರೊಂದಿಗೆ ಸೈಡ್ ಕೊಡೋ ವಿಚಾರದಲ್ಲಿ ವಾಗ್ವಾದ ನಡೆದಿದ್ದು ಮಿತಿಮೀರಿ ಸಾರ್ವಜನಿಕರ ಎದುರೇ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಫೆಬ್ರವರಿ 10 ರಂದು ನಡೆದಿದ್ದು ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಹೊಡೆದಾಟದ ದೃಶ್ಯಗಳು ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ.
ಎದುರು ಕಾರಿನವರು ನಟಿ ಮೇಲೆ ಕೈ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದನ್ನು ಗಮನಿಸಿದ ಸ್ಥಳೀಯರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.