ನಾಡಿನ ಸಮಸ್ತ ನಾಗರಿಕರಿಗೆ ಬಕ್ರೀದ್ ಹಬ್ಬದ ಶುಭಾಶಯಗಳು – ಟಿ. ಎಂ. ಶಾಹಿದ್ ತೆಕ್ಕಿಲ್…
ಸುಳ್ಯ: ನಾಡಿನ ಸಮಸ್ತ ನಾಗರಿಕರಿಗೆ ಬಕ್ರೀದ್ ಹಬ್ಬದ ಶುಭಾಶಯಗಳನ್ನು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ. ಎಂ. ಶಾಹಿದ್ ತೆಕ್ಕಿಲ್ ಹಾರೈಸಿದ್ದಾರೆ. ನಾಡಿನ ಜನತೆ ಶಾಂತಿ ಸೌಹಾರ್ದತೆಯಿಂದ ಬಾಳಬೇಕು ಮಾತ್ರವಲ್ಲದೆ ಬಕ್ರೀದ್ ಹಬ್ಬವು ಎಲ್ಲರಿಗೂ ಸಮೃದ್ಧಿ ಮತ್ತು ಸುಖ ಸಂಪತ್ತನ್ನು ನೀಡಲಿ ಎಂದು ಅವರು ಹಾರೈಸಿರುತ್ತಾರೆ.
ಆದರೆ ಮುಸ್ಲಿಂ ಬಾಂದವರು ಈ ಸಲ ಕೋವಿಡ್ 19 ರ ಹಿನ್ನಲೆಯಲ್ಲಿ ಬಕ್ರೀದ್ ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಬೇಕು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು, ಸ್ಯಾನಿಟೈಸರ್ ಯನ್ನು ಉಪಯೋಗಿಸಬೇಕು. ಆಗಾಗ ಕೈ ಗಳನ್ನು ತೊಳೆದುಕೊಂಡು ಶುಚಿತ್ವವನ್ನು ಕಾಪಾಡಬೇಕು. ಆಲಿಂಗನ ಮೂಲಕ ಶುಭಾಶಯವನ್ನು ಮಾಡುವುದು ಒಳ್ಳೆಯದಲ್ಲ ಎಂದು ಕೂಡ ಟಿ. ಎಂ. ಶಾಹಿದ್ ವಿನಂತಿಸಿರುತ್ತಾರೆ.