ಸುಳ್ಯ ನ. ಪಂ- ನೂತನ ಅಧ್ಯಕ್ಷರಾಗಿ ವಿನಯ ಕುಮಾರ್ ಕಂದಡ್ಕ, ಉಪಾಧ್ಯಕ್ಷೆ ಯಾಗಿ ಸರೋಜಿನಿ ಪೆಲ್ತಡ್ಕ ಆಯ್ಕೆ…

ಸುಳ್ಯ: ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾಗಿ ವಿನಯ ಕುಮಾರ್ ಕಂದಡ್ಕ ಹಾಗೂ ಉಪಾಧ್ಯಕ್ಷೆ ಯಾಗಿ ಸರೋಜಿನಿ ಪೆಲ್ತಡ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಿಜೆಪಿ ಬಹುಮತ ಹೊಂದಿರುವ ಸುಳ್ಯ ನಗರ ಪಂಚಾಯತ್ ನ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಈ ಅವಿರೋಧ ಆಯ್ಕೆ ಆಗಿದೆ.
ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಅನಂತಶಂಕರ್ ಕಾರ್ಯನಿರ್ವಹಿಸಿದರು. ಶಾಸಕ ಎಸ್ ಅಂಗಾರ. ಎಂ.ಆರ್.ಸ್ವಾಮಿ, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಉಪ ತಹಶೀಲ್ದಾರ್ ಚಂದ್ರಕಾಂತ್ ಎಂ.ಆರ್. ಹಾಗೂ ನಗರ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.