ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಂತರರಾಷ್ಟ್ರೀಯ ಸಮ್ಮೇಳನ…
ಮೂಡುಬಿದ್ರೆ : ಇಂಜಿನಿಯರಿಂಗ್ ವಿಜ್ಞಾನ ಮತ್ತು ತಂತ್ರಜ್ಞಾನದ ಅಂತರರಾಷ್ಟ್ರೀಯ ಸಮ್ಮೇಳನ (ICFEST -2020) ಡಿ. 18 ಮತ್ತು 19 ರಂದು ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆಯಿತು.
ಉದ್ಘಾಟನಾ ಭಾಷಣ ಮತ್ತು ಮುಖ್ಯ ಭಾಷಣವನ್ನು ಮಲೇಷ್ಯಾದ ಅಂತರರಾಷ್ಟ್ರೀಯ ಇಸ್ಲಾಮಿಕ್ ವಿಶ್ವವಿದ್ಯಾಲಯದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ.ಎಸ್. ಎ ಖಾನ್ ಅವರು ಮಾಡಿದರು. ಅವರು ಏರೋಸ್ಪೇಸ್ ಉದ್ಯಮಗಳಲ್ಲಿನ ಸವಾಲುಗಳು ಮತ್ತು ಸಂಶೋಧನಾ ಪ್ರವೃತ್ತಿಗಳ ಬಗ್ಗೆ ಮಾತನಾಡಿದರು.
ಯೆನೆಪೋಯಾ ಸಮೂಹದ ನಿರ್ದೇಶಕರಾದ ಯೆನೆಪೊಯ ಅಬ್ದುಲ್ಲಾ ಜಾವೇದ್ ಅವರು ಉಪಸ್ಥಿತರಿದ್ದು, ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲ ಹಾಗೂ ಸಮ್ಮೇಳನದ ಮುಖ್ಯ ಸಂಯೋಜಕರಾದ ಡಾ.ಆರ್.ಜಿ.ಡಿಸೋಜಾ ಅವರು ಸ್ವಾಗತಿಸಿದರು. ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಮತ್ತು ಸಮ್ಮೇಳನದ ಸಂಯೋಜಕ ಡಾ.ಸತೀಶ ಎನ್ ಪ್ರಸ್ತಾವನೆಗೈದರು. ಡಾ.ರವೀಂದ್ರ ಐ ಬಡಿಗೇರ್ ವಂದಿಸಿದರು.
ಸಮ್ಮೇಳನದಲ್ಲಿ ದೇಶ ಮತ್ತು ವಿದೇಶಗಳ ವಿವಿಧ ಪ್ರಸಿದ್ಧ ಸಂಶೋಧನಾ ಸಂಸ್ಥೆಗಳಿಂದ ಆರು ಆಹ್ವಾನಿತ ಭಾಷಣಕಾರರು ಭಾಗವಹಿಸಿದ್ದರು. ಆಹ್ವಾನಿತ ಮಾತುಕತೆಯ ಭಾಗವಾಗಿ ಭಾಗವಹಿಸಿದವರಿಗೆ ತಮ್ಮ ಸಂಶೋಧನಾ ಕಾರ್ಯವನ್ನು ಅವರು ಪ್ರಸ್ತುತಪಡಿಸಿದರು. ಈ ಸಮ್ಮೇಳನದಲ್ಲಿ ಭಾರತ ಮತ್ತು ವಿದೇಶಗಳ ಹಲವಾರು ಸಂಸ್ಥೆಗಳಿಂದ ಎಂಭತ್ತಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ನೊಂದಾಯಿಸಲ್ಪಟ್ಟಿದ್ದವು.
ಈ ಕಾರ್ಯಕ್ರಮವನ್ನು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ಅನ್ಫಾಸ್ ಮುಕ್ರಮ್ ಟಿ ನಿರ್ವಹಿಸಿದ್ದರು.