112 ತುರ್ತು ಸೇವೆಯನ್ನು ಪ್ರತಿ ಪೊಲೀಸ್ ಠಾಣೆಗೆ ಒಂದರಂತೆ ವಿಸ್ತರಣೆ ಮಾಡಲು ಗೃಹ ಸಚಿವರಿಗೆ ಶರೀಫ್ ಕಂಠಿ ಮನವಿ…

ಕಡಬ:ಇತ್ತೀಚೆಗೆ ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಗೃಹ ಸಚಿವ ಜಿ. ಪರಮೇಶ್ವರ್ ಅವರಿಗೆ, ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ ಅವರು 112 ತುರ್ತು ಸೇವೆಯು, ಬೆಳ್ಳಾರೆ ಮತ್ತು ಸುಳ್ಯ ಕ್ಕೆ ಕೇವಲ ಒಂದೇ ಇರುವುದರಿಂದ ತುರ್ತು ಸಂದರ್ಭದಲ್ಲಿ ಶೀಘ್ರ ಸ್ಪಂದನೆ ಅಸಾಧ್ಯ. ಸುಳ್ಯ ಮತ್ತು ಬೆಳ್ಳಾರೆಗೆ 112 ರ ಪತ್ಯೇಕ ತುರ್ತು ಸೇವೆ ನೀಡಬೇಕು ಎಂದು ಮನವಿ ಮಾಡಿದರು.
ಅವರ ಮನವಿಗೆ ಸ್ಪಂದಿಸಿದ ಸಚಿವರು, ರಾಜ್ಯಾದ್ಯಂತ ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಗೆ ವಿಸ್ತರಣೆ ಮಾಡುವುದಾಗಿ ತಿಳಿಸಿದ್ದಾರೆ.