ಸುಳ್ಯ ತಾಲೂಕು ಮತ್ತು ರಾಜ್ಯ ಮಟ್ಟದ ದಫ್ ಸ್ಪರ್ಧೆಯ ಮೆರವಣಿಗೆ…
ಸಂಪಾಜೆ ಗೂನಡ್ಕದಲ್ಲಿ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಂ ಫಾರೂಕ್ ರಿಂದ ಚಾಲನೆ...
ಸುಳ್ಯ: ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜೆ.ಕೆ ಹಮೀದ್ ಗೂನಡ್ಕ ರವರ ನೇತೃತ್ವದಲ್ಲಿ ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆ ಗೂನಡ್ಕ , ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ, ಮುಸ್ಲಿಂ ಯೂತ್ ಪೆಡರೇಶನ್ ಹಾಗೂ ಸಿ.ಕೆ ಲೆಜೆಂಡ್ಸ್ ಕಲ್ಲುಗುಂಡಿ ಇದರ ಜಂಟಿ ಆಶ್ರಯದಲ್ಲಿ ಸುಳ್ಯ ತಾಲೂಕು ಮತ್ತು ರಾಜ್ಯ ಮಟ್ಟದ ಹೊನಲು ಬೆಳಕಿನ ದಫ್ ಕಾರ್ಯಕ್ರಮದ ಸ್ಪರ್ಧಾರ್ಥಿಗಳ ರ‍್ಯಾಲಿಗೆ ಜೆ.ಡಿ.ಎಸ್ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಎಂ ಫಾರೂಕ್ ದಫ್ ಬಾರಿಸುವುದರೊಂದಿಗೆ ಗೂನಡ್ಕ ಪೇರಡ್ಕ ರಸ್ತೆಯಲ್ಲಿ ಚಾಲನೆಯನ್ನು ನೀಡಿದರು. ಕಾರ‍್ಯಕ್ರಮದಲ್ಲಿ ಭಾಗವಹಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಬಿ.ಎಂ ಫಾರೂಕ್ ರವರು ದಫ್ ಇಸ್ಲಾಮಿನ ಒಳ್ಳೆಯ ಸಾಂಸ್ಕೃತಿಕ ಕಲೆಯಾಗಿದೆ. ನಶಿಸಿ ಹೊಗುವ ಈ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಈ ಭಾಗದ ಜನನಾಯಕರುಗಳು ಮಾಡುತ್ತಿರುವುದು ಶ್ಲಾಘನೀಯ. ಈ ಹಿಂದೆ ನಾನು ಈ ಭಾಗದ ದರ್ಕಾಸ್ ಅಂಗನವಾಡಿ ಅಭಿವೃದ್ಧಿ ಕೆಲಸಕ್ಕೆ ನನ್ನ ಪ್ರದೇಶಾಭಿವೃದ್ಧಿ ನಿಧಿಯಿಂದ 3 ಲಕ್ಷ ರೂಪಾಯಿ ಅನುದಾನವನ್ನು ನೀಡಿರುತ್ತೇನೆ. ಮುಂದೆಯು ಅನುದಾನ ನೀಡಲು ಬದ್ದನಾಗಿರುತ್ತೇನೆ. ಟಿ.ಎಂ ಶಹೀದ್ ತೆಕ್ಕಿಲ್, ಜಿ ಕೆ ಹಮೀದ್ ಗೂನಡ್ಕ, ಡಾಕ್ಟರ್ ಉಮ್ಮರ್ ಬೀಜದಕಟ್ಟೆಯಂತ ನಾಯಕರು ಈ ಭಾಗದಲ್ಲಿ ದ್ದಾರೆ. ಹಿರಿಯ ಮುಖಂಡರಾಗಿರುವ ಶಾಹಿದ್ ತೆಕ್ಕಿಲ್ ಅವರಿಗೆ ಉನ್ನತ ಹುದ್ದೆ ದೊರಕುವಂತಾಗಲಿ ಎಂದು ಹಾರೈಸಿದರು. ಪೇರಡ್ಕ ಜುಮಾ ಮಸೀದಿಯ ಖತೀಬರಾದ ನಹೀಂ ಫೈಝಿ ದುವಾ ನೆರವೇರಿಸಿದರು. ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ಹಾಗೂ ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ| ಉಮ್ಮರ್ ಬೀಜದಕಟ್ಟೆ, ಉದ್ಯಮಿ ಬಿ.ಎಂ ಫಾರೂಕ್ ರನ್ನು ಸನ್ಮಾನಿಸಿದರು. ಜಿ.ಕೆ ಹಮೀದ್ ಗೂನಡ್ಕ ಸ್ವಾಗತಿಸಿದರು. ಕಲ್ಲುಗುಂಡಿ ಜಮಾಅತ್ ಅಧ್ಯಕ್ಷ ಆಲಿಹಾಜಿ, ಅರಂತೋಡು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ, ಪೇರಡ್ಕ ಜಮಾಅತ್ ಉಪಾಧ್ಯಕ್ಷ ಟಿ ಬಿ ಹನೀಫ್ ಗೂನಡ್ಕ ,ಕಾರ್ಯದರ್ಶಿ ಪಿ.ಕೆ ಉಮ್ಮರ್ ಗೂನಡ್ಕ,ನಗರ ಪಂಚಾಯತ್ ಸದಸ್ಯರಾದ ಕೆ.ಎಸ್. ಉಮ್ಮರ್, ಸಿದ್ಧಿಕ್ ಕೊಕ್ಕೊ, ಶರೀಫ್ ಕಂಠಿ, ಮುಖಂಡರಾದ ಖಲಂದರ್ ಎಲಿಮಲೆ, ತಾಜ್ ಮೊಹಮ್ಮದ್, ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಸ್.ಕೆ ಹನೀಫ್, ರಸೀದ್ ಜಟ್ಟಿಪಳ್ಳ ಉನೈಸ್ ಪೆರಾಜೆ, ಉಮ್ಮರ್ ತಾಜ್ ಕಲ್ಲುಗುಂಡಿ, ಇಬ್ರಾಹಿಂ ಮೈಲುಕಲ್ಲು, ಆರಿಫ್ ತೆಕ್ಕಿಲ್, ರಫೀಕ್ ಕರಾವಳಿ, ಕೆ.ಎ ರಜಾಕ್ ಕಲ್ಲುಗುಂಡಿ ಹನೀಫ್ ಮೊಟ್ಟೆಂಗಾರ್, ಅಬ್ದುಲ್ ಖಾದರ್ ಮೊಟ್ಟೆಂಗಾರ್, ನೌಶಾದ್ ಅಝ್ಹರಿ, ಅಬ್ದುಲ್ ಕಲಾಂ ಸುಳ್ಯ, ಅಶ್ರಫ್ ಟರ್ಲಿ, ಉಬೈಸ್ ಗೂನಡ್ಕ ಮೊದಲಾದವರು ಉಪಸ್ಥಿತರಿದ್ದರು.