ಅರಂತೋಡು ವಿಶ್ವ ಪರಿಸರ ದಿನಾಚರಣೆ…
ಸುಳ್ಯ: ಎಸ್ ಕೆ ಎಸ್ ಎಸ್ ಎಫ್ ಅರಂತೋಡು, ಅನ್ವರುಲ್ ಹುಧಾ ಯಂಗ್ ಮೆನ್ಸ್ ಯೆಸೋಸಿಯೇಶನ್ ಹಾಗು ನುಸ್ರತುಲ್ ಇಸ್ಲಾಂ ಮದರಸ ಅರಂತೋಡು ಇವುಗಳ ಜಂಟಿ ಆಶ್ರಯದಲ್ಲಿ ಅರಂತೋಡು ಮಸೀದಿ ವಠಾರದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಸಸಿಗಳನ್ನು ವಿತರಿಸಿ ಮಾತನಾಡಿದ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ ಎಂ ಶಾಹಿದ್ ತೆಕ್ಕಿಲ್ ಶುಚಿತ್ವವು ಮನೆಯಿಂದಲೇ ಪ್ರಾರಂಭವಾಗಬೇಕು, ಪ್ರತಿಯೊಬ್ಬ ಸದಸ್ಯರು ಒಂದೊಂದು ಗಿಡಗಳನ್ನು ನೆಡುವುದರ ಮೂಲಕ ಪರಿಸರವನ್ನು ಉಳಿಸಬೇಕು ಮತ್ತು ರಕ್ಷಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸದರ್ ಮುಅಲ್ಲಿಮ್ ಸಹದ್ ಪೈಝಿ, ಅರಂತೋಡು ಜಮಾತ್ ಅಧ್ಯಕ್ಷ ಅಶ್ರಫ್ ಗುಂಡಿ, ಎ ಎಚ್ ವೈ ಎ ಅಧ್ಯಕ್ಷ ಅಬ್ದುಲ್ ಮಜೀದ್ ಶುಭ ಹಾರೈಸಿದರು, ಮದರಸ ಮ್ಯಾನೇಜ್ ಮೆಂಟ್ ಸಂಚಾಲಕ ಅಮೀರ್ ಕುಕ್ಕುಂಬಳ, ಜಮಾತ್ ಕಾರ್ಯದರ್ಶಿ ಕೆಎಂ ಮೂಸಾನ್, ಸ್ವಲಾತ್ ಮಜಿಲಿಸ್ ಉಪಾಧ್ಯಕ್ಷ ಅಬೂಬಕ್ಕರ್ ಪಾರೆಕ್ಕಲ್, ಎ ಎಚ್ ವೈ ಎ ಕಾರ್ಯದರ್ಶಿ ಪಸಿಲು ಮಾಜಿ ಅಧ್ಯಕ್ಷ ಹನೀಫ್, ಜುಬೈರ್, ಮುಝಮ್ಮಿಲ್ ಕುಕ್ಕುಂಬಳ, ಝಿಯಾದ್, ಅಝರ್ ಉಪಸ್ಥಿತರಿದ್ದರು. ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಆಶಿಕ್ ಕುಕ್ಕುಂಬಳ ಸ್ವಾಗತಿಸಿ, ವಂದಿಸಿದರು.