ಯೆನೆಪೋಯ ಅಬ್ದುಲ್ಲ ಕುಂಇ್ ಯವರಿಗೆ ಸನ್ಮಾನ…

ಮಂಗಳೂರು : ಇತ್ತೀಚೆಗೆ ಪ್ರತಿಷ್ಠಿತ ಗುಲ್ಬರ್ಗ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್‌ ಪಡೆದ ಯೆನೆಪೋಯ ಡೀಮ್ಡ್‌
ವಿಶ್ವವಿದ್ಯಾನಿಲಯದ ಕುಲಪತಿ ಹಾಜಿ ಯೆನೆಪೋಯ ಅಬ್ದುಲ್ಲ ಕುಂಇ್ ಯವರಿಗೆ ಸುಳ್ಯ ತಾಲೂಕಿನ ವಿವಿಧ ಸಂಘ
ಸಂಸ್ಥೆಗಳ ಪರವಾಗಿ ಮಂಗಳೂರಿನಲ್ಲಿ ಸನ್ಮಾನಿಸಲಾಯಿತು.
ದ. ಕ.ಜಿಲ್ಲೆಯ ಎಲ್ಲಾ ತಾಲೂಕುಗಳ ಮುಸ್ಲಿಂ ಸಮುದಾಯದ ಉಲಮಾ -ಉಮರಾ ನೇತಾರರ ಸೌಹಾರ್ದ ಸಂಗಮದಲ್ಲಿ ಈ
ಗೌರವಾರ್ಪಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕಣಚೂರು ಮೆಡಿಕಲ್‌ ಕಾಲೇಜು ಅಧ್ಯಕ್ಷ ಕಣಚೂರು ಮೋನು ಹಾಜಿ, ಮಾಜಿ ಸಚಿವ, ವಿಪಕ್ಷ ಉಪನಾಯಕ ಯು. ಟಿ ಖಾದರ್‌, ಬ್ಯಾರಿಸ್‌ ಚೇಂಬರ್‌ ಆಫ್‌ ಕಾಮರ್ಸ್‌ ನ ಜಿಲ್ಲಾಧ್ಯಕ್ಷ ರಶೀದ್‌ ಹಾಜಿ ಎಸ್‌ ಎಂ ಆರ್‌, ಸುಳ್ಯ ಸುನ್ನಿ ಮಹಲ್‌ ಫೆಡರೇಶನ್‌ ಅಧ್ಯಕ್ಷ ಇಬ್ರಾಹಿಂ ಹಾಜಿ ಕತ್ತಾರ್‌, ಸುಳ್ಯ ತಾಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಇಕ್ಭಾಲ್‌ ಎಲಿಮಲೆ, ಮಂಗಳೂರು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮಾಜಿ ಮೇಯರ್‌ ಅಶ್ರಫ್‌, ಜಿಲ್ಲಾ ವಕ್ಟ್‌ ಸಲಹಾ ಸಮಿತಿಯ ನಿಕಟಪೂರ್ವ ಸದಸ್ಯ ಕೆ ಎಂ ಮುಸ್ತಫಾ ಉಪಸ್ಥಿತರಿದ್ದರು.

Related Articles

Back to top button