ದಶಂಬರ 28,29 ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನ….
ಬಂಟ್ವಾಳ: ತಾಲೂಕು 20ನೇ ಸಾಹಿತ್ಯ ಸಮ್ಮೇಳನವು ದಶಂಬರ 28,29 ರಂದು ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲಾ ಸಭಾಂಗಣದಲ್ಲಿ ನಡೆಸುವುದಾಗಿ ಮಾಣಿಯಲ್ಲಿ ಜರಗಿದ ಸಮ್ಮೇಳನದ ಸಮಾಲೋಚನಾ ಸಭೆಯಲ್ಲಿ ತೀರ್ಮಾನಿಸಲಾಯಿತು.
ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ಸಂಚಾಲಕ ಜಡ್ತಿಲ ಪ್ರಹ್ಲಾದ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಎರಡು ದಿನಗಳ ಸಮ್ಮೇಳನವನ್ನು ಅದ್ದೂರಿಯಾಗಿ ನಡೆಸಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಬಂಟ್ವಾಳ ತಾಲೂಕು ಕ.ಸಾ.ಪ ನಿಕಟಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ ಸಮ್ಮೇಳನದ ಕಾರ್ಯಕ್ರಮ ಹಾಗೂ ವಿವಿಧ ಸಮಿತಿಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು. ಜಿ.ಪಂ. ಸದಸ್ಯೆ ಮಂಜುಳಾ ಮಾಧವ ಮಾವೆ , ಗ್ರಾ.ಪಂ ಅಧ್ಯಕ್ಷೆ ಮಮತಾ ಶೆಟ್ಟಿ, ಉಪಸ್ಥಿತರಿದ್ದು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು . ಬಾಲಕೃಷ್ಣ ಆಳ್ವ ಕೊಡಾಜೆ ಸ್ವಾಗತ ಸಮಿತಿ , ಆರ್ಥಿಕಸಮಿತಿ, ಮೆರವಣಿಗೆ ಸಮಿತಿಯನ್ನು ರಚಿಸುವ ಬಗ್ಗೆ ಮಾಹಿತಿ ನೀಡಿದರು.
ಮಾಣಿ ಲಯನ್ಸ್ ಕ್ಲಬ್ ಅಧ್ಯಕ್ಷ ನಿವೃತ ಶಿಕ್ಷಕ ಗಂಗಾಧರ ರೈ ಮಾಣಿ, ಡಾ. ಮನೋಹರ ರೈ ಗಡಿಯಾರ, ಕರ್ನಾಟಕ ಪ್ರೌಢ ಶಾಲೆಯ ಕಾರ್ಯದರ್ಶಿ ಇಬ್ರಾಹಿಂ ಕೆ. ಮಾಣಿ , ಸರಕಾರಿ ಪ್ರಾಥಮಿಕ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷ ಜನಾರ್ದನ ಪೆರಾಜೆ, ಮಾಜಿ ತಾ.ಪಂ ಸದಸ್ಯ ಕುಶಲ ಎಮ್ ಪೆರಾಜೆ, ಡಿ.ತನಿಯಪ್ಪ ಗೌಡ ನೇರಳಕಟ್ಟೆ , ಹೆಚ್. ಗಿರೀಶ್ ಪೆರ್ಗಡೆ ಪೆರ್ನೆ ,ಅಶ್ವಥ್ ಬರಿಮಾರು, ಕೆ.ನಿರಂಜನ್ ರೈ, ದಾಸಪ್ಪ ಶೆಟ್ಟಿ ನೆಟ್ಲಮುಡ್ನೂರು, ಪತ್ರಕರ್ತ ಲತೀಫ್ ನೇರಳಕಟ್ಟೆ , ರತ್ನಾಕರ ರೈ, ಕೆ.ಪ್ರವೀಣ್ ರೈ ಶಾಲಾ ಆಡಳಿತಾಧಿಕಾರಿ ಶ್ರೀಧರ್, ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ ಮೊದಲಾದವರು ಸಮ್ಮೇಳನದ ಬಗ್ಗೆ ಅನಿಸಿಕೆಗಳನ್ನು ತಿಳಿಸಿದರು.
ಸಭೆಯಲ್ಲಿ ಅ. 26 ರಂದು ಅಪರಾಹ್ನ 2 ಗಂಟೆಗೆ ಪೂರ್ವಭಾವಿ ಸಭೆಯನ್ನು ನಡೆಸುವುದೆಂದು ನಿರ್ಣಯಿಸಲಾಯಿತು. ಪೆರ್ನೆ-ಬಿಳಿಯೂರು, ಬರಿಮಾರು, ಮಾಣಿ, ಪೆರಾಜೆ, ಕಡೇಶ್ವಾಲ್ಯ , ನೆಟ್ಲಮುಡ್ನೂರು, ಕೆದಿಲ, ಅನಂತಾಡಿ, ಇಡ್ಕಿದು ಗ್ರಾಮ ಸಮಿತಿಗಳಿಗೆ ಹಾಗೂ ವಿವಿಧ ಸಮಿತಿಗಳಿಗೆ ಸಂಚಾಲಕರನ್ನು ಆಯ್ಕೆ ಮಾಡಲಾಯಿತು.