ಬಹುಮುಖ ಪ್ರತಿಭೆಯ ಶ್ರೀ ಮಾನ್ಯಾ ಭಟ್ ಕಡಂದಲೆಗೆ ಸನ್ಮಾನ…
ಮಂಗಳೂರು: ದಿ।ಕೆ.ಜಿ.ನಾರಾಯಣ ಭಟ್ ಕಡಂದಲೆ ಮತ್ತು ರಾಧಾಭಟ್ ಹಾಗೂ ಕಟೀಲು ಅನಂತ ಪದ್ಮನಾಭ ಆಸ್ರಣ್ಣ ದಂಪತಿಗಳ ಮೊಮ್ಮಗಳು, ಕಡಂದಲೆ ಸುಬ್ರಹ್ಮಣ್ಯ ಭಟ್ ಮತ್ತು ಶ್ರೀ ವಿದ್ಯಾಭಟ್ ದಂಪತಿಗಳ ಸುಪುತ್ರಿ, ಕಟೀಲು ದುರ್ಗಾಪರಮೇಶ್ವರಿ ಆಂಗ್ಲ ಮಾದ್ಯಮ ಶಾಲೆ ಯ ಯು.ಕೆ.ಜಿ ತರಗತಿಯ ವಿದ್ಯಾರ್ಥಿನಿ, ಸಂಗೀತ, ನೃತ್ಯ, ಭರತನಾಟ್ಯ, ಸಿನಿಮಾ ಹಾಡು, ಭಗವದ್ಗೀತೆ, ವಿಷ್ಣು ಸಹಸ್ರನಾಮ,ದೇವರ ಮಂತ್ರ, ಕ್ರೀಡೆಗಳಲ್ಲಿ ಪರಿಣಿತಳಾದ ,ತನ್ನ ಪ್ರತಿಭೆಯ ಮೂಲಕ ಹಲವು ಪ್ರಶಸ್ತಿ ಗಳನ್ನು ಮುಡಿಗೇರಿಸಿಕೊಂಡ ಶ್ರೀ ಮಾನ್ಯಾ ಭಟ್ ಕಡಂದಲೆ ಅವರನ್ನು ಜು.7ರಂದು ಕಡಂದಲೆಯಲ್ಲಿರುವ ಅವರ ಮನೆಯಲ್ಲಿ ಹೊಸಬೆಳಕು ಬಡವರ ಆಶಾಕಿರಣ ಆರ್ಲಪದವು (ರಿ) ಮತ್ತು ರಕ್ತಸಂಜೀವಿನಿ ಬ್ಲಡ್ ಗ್ರೂಪ್ ಪುತ್ತೂರು,ಹಾಗೂ ಶ್ರೀಕೃಷ್ಣ ಯುವಕ ಮಂಡಲ ಸಿಟಿಗುಡ್ಡೆ ಪುತ್ತೂರು ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರಕ್ತಸಂಜೀವಿನಿ ಬ್ಲಡ್ ಗ್ರೂಪ್ ನ ರಕ್ತದಾನಿ ಸಮಾಜಸೇವಕ ನವೀನ್ ಸಿಟಿಗುಡ್ಡೆ, ಶ್ರೀ ಕೃಷ್ಣ ಯುವಕ ಮಂಡಲದ ಅಧ್ಯಕ್ಷರಾದ ರಾಜೀವ ಗೌಡ, ರಕ್ತ ಸಂಜೀವಿನಿ ಸದಸ್ಯರಾದ ಮನೋಹರ, ಕಲಾವಿದ ಕೃಷ್ಣಪ್ಪ ಹಾಗೂ ಶ್ರೀ ಮಾನ್ಯಾ ಭಟ್ ಕಡಂದಲೆಯವರ ಮನೆಯವರು ಉಪಸ್ಥಿತರಿದ್ದರು.
ಸರಕಾರಿ ಪ್ರೌಢಶಾಲೆ ಕಬಕದ ಸಾಹಿತಿ, ಶಿಕ್ಷಕಿ ಶಾಂತಾ ಪುತ್ತೂರು ಮುಖ್ಯ ಅತಿಥಿ ಗಳಾಗಿದ್ದರು. ಶ್ರೀಕೃಷ್ಣ ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ರಾಜೀವಗೌಡ ಅಭಿನಂದನಾ ಪತ್ರ ವಾಚಿಸಿದರು.ಕಲಾವಿದ ಕೃಷ್ಣಪ್ಪ ಕಾರ್ಯಕ್ರಮ ನಿರೂಪಿಸಿದರು. ಕಡಂದಲೆ ಸುಬ್ರಹ್ಮಣ್ಯ ಭಟ್ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.