75 ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ನಿವೃತ್ತ ಸೈನಿಕ ಫಸಿಲು ರವರಿಗೆ ಸನ್ಮಾನ…

ಸುಳ್ಯ :ಅನ್ವ‍ಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ಹಾಗೂ ನುಸ್ರತುಲ್ ಇಸ್ಲಾಂ ಮದರಸ ಅರಂತೋಡು ಇದರ ಜಂಟಿ ಅಶ್ರಯದಲ್ಲಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಮತ್ತು ನಿವೃತ್ತ ಸೈನಿಕ ಫಸೀಲು ರವರಿಗೆ ಸನ್ಮಾನ ಕಾರ್ಯಕ್ರಮ ಆ.15ರಂದು ಅರಂತೋಡು ಮದರಸ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಬದ್ರಿಯಾ ಜುಮ್ಮಾಮಸೀದಿ ಅಧ್ಯಕ್ಷ ರಾದ ಅಶ್ರಫ್ ಗುಂಡಿ ವಹಿಸಿದ್ದರು. ನಿವೃತ್ತ ಸೈನಿಕ ಫಸೀಲು ರವರನ್ನು ಸ್ಥಳೀಯ ಮಸೀದಿ ಖತೀಬರಾದ ಬಹುಅಲ್ ಹಾಜ್ ಇಸ್ಹಾಖ್ ಬಾಖವಿ ಸನ್ಮಾನಿಸಿದರು. ಮುಖ್ಯ ಅತಿಥಿಗಳಾಗಿ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಅಧ್ಯಕ್ಷ ಟಿ.ಎಮ್.ಶಹೀದ್ ತೆಕ್ಕಿಲ್, ನುಸ್ರತುಲ್ ಇಸ್ಲಾಂ ಮದರಸ ಸಹಾಯಕ ಅಧ್ಯಾಪಕ ಹಾಜಿ ಸಾಜಿದ್ ಅಝ್ಹರಿ, ಜಮಾ ಅತ್ ಉಪಾಧ್ಯಕ್ಷ ಹಾಜಿ ಕೆ.ಎಮ್.ಮಹಮ್ಮದ್ , ಅನ್ವಾರುಲ್ ಹುದಾ ಯಂಗ್ ಮೇನ್ಸ್ ಎಸೋಸಿಯೇಶನ್ ಅಧ್ಯಕ್ಷ ಮಜೀದ್, ನುಸ್ರತುಲ್ ಇಸ್ಲಾಂ ಮದರಸ ಮ್ಯಾನೇಜ್‌ಮೆಂಟ್ ಸಂಚಾಲಕ ಆಮೀರ್ ಕುಕ್ಕುಂಬಳ, ಜುಮ್ಮಾ ಮಸೀದಿ ಕಾರ್ಯದರ್ಶಿ ಮೂಸಾನ್ ಕೆ.ಎಮ್,ಜಮಾ ಅತ್ ಕೋಶಾಧಿಕಾರಿ ಬದ್ರುದ್ದೀನ್ ಪಠೇಲ್ ,ನಿವೃತ್ತ ಅಧ್ಯಾಪಕ ಅಬ್ದುಲ್ ಮಾಸ್ಟರ್ ಸೇರಿದಂತೆ ಜಮಾ ಅತ್ ಸದಸ್ಯರು , ಸ್ವಲಾತ್ ಸಮಿತಿ ಸದಸ್ಯರು , ಮದರಸ ವಿಧ್ಯಾರ್ಥಿಗಳು ,ಎಸೋಸಿಯೆಶನ್ ಪದಾಧಿಕಾರಿಗಳು ಭಾಗವಹಿಸಿದ್ದರು. ಜಮಾ ಅತ್ ಕಾರ್ಯದರ್ಶಿ ಕೆ.ಎಮ್.ಸ್ವಾಗತಿಸಿ, ಮಜೀದ್ ವಂದಿಸಿದರು.

Related Articles

Back to top button