ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ಟೌನ್ ವತಿಯಿಂದ 75 ನೇ ಸ್ವಾತಂತ್ರ್ಯ ದಿನಾಚರಣೆ…

ಸುಳ್ಯ: ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ಟೌನ್ ಸಮಿತಿ ವತಿಯಿಂದ 75 ನೇ ಸ್ವಾತಂತ್ರೋತ್ಸವವನ್ನು ಸುನ್ನೀ ಮಹಲ್ ಮುಂಭಾಗದಲ್ಲಿ ಆಚರಿಸಲಾಯಿತು .
ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ಕ್ಲಸ್ಟರ್ ಅಧ್ಯಕ್ಷ ಅಬ್ದುಲ್ ರಜಾಕ್ ಕರಾವಳಿ ವಹಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ. ರಿಝ್ವಾನ್ ದ್ವಜಾರೋಹಣಗೈದು ಮಾತನಾಡಿದರು. ಬದ್ರಿಯ ಜುಮಾ ಮಸೀದಿ ಅರಂಬೂರು ಖತೀಬ ರಾದ ಮೂಸ ಮಕ್ದೂಮಿ ಸ್ವಾತಂತ್ರ್ಯ ಸಂದೇಶ ಭಾಷಣ ನಡೆಸಿದರು.
ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕು ಮದ್ರಸಾ ಮ್ಯಾನೇಜ್‌ಮೆಂಟ್ ಕೋಶಾಧಿಕಾರಿ ಹಾಜಿ ಎಸ್.ಎ ಹಮೀದ್, ಎಸ್.ವೈ.ಎಸ್ ನಾಯಕರಾದ ಹಾಜಿ ಅಹ್ಮದ್ ಸುಪ್ರೀಂ, ಹಾಜಿ ಅಹ್ಮದ್ ಪಾರೆ, ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ವಲಯ ಕಾರ್ಯದರ್ಶಿ ಅಕ್ಬರ್ ಕರಾವಳಿ, ಹಾಜಿ ಅಬ್ದುಲ್ಲ ಕಟ್ಟೆಕ್ಕಾರ್, ಸುಳ್ಯ ನಗರ ಪಂಚಾಯತ್ ಸದಸ್ಯ ಹಾಜಿ ರಿಯಾಜ್ ಕಟ್ಟೆಕ್ಕಾರ್, ಹಾಜಿ ಮೊಯಿದೀನ್ ಫ್ಯಾನ್ಸಿ, ಬಾಬಾ ಹಾಜಿ ಅಜಾದ್, ಅಬ್ದುಲ್ ಖಾದರ್ ಹಾಜಿ ಆಜಾದ್, ಅಬ್ದುಲ್ ಮಜೀದ್ ಕೆ.ಬಿ, ಶಂಸುದ್ದೀನ್ ಜಯನಗರ, ರಹೀಮ್ ಫ್ರೀಝೋನ್, ರಂಶಾದ್ ನಾವೂರ್, ಅಬ್ದುಲ್ ರಜಾಕ್ ನಾವೂರ್ ಹಾಗೂ ಸುಳ್ಯ ಟೌನ್ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು. ಆಶಿಕ್ ಸುಳ್ಯ ಸ್ವಾಗತಿಸಿ, ವಂದಿಸಿದರು.

Related Articles

Back to top button