SSF ಗಾಂಧಿನಗರ ವಾರ್ಷಿಕ ಕೌನ್ಸಿಲ್ – ನೂತನ ಸಾರಥ್ಯ…

ಸುಳ್ಯ : ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) SSF ಗಾಂಧಿನಗರ ಶಾಖೆಯ ವಾರ್ಷಿಕ ಕೌನ್ಸಿಲ್ ಹಾಗೂ ಖಲಂದರ್ ಶಾಫಿ ಮಾಂಬ್ಳಿ ಅನುಸ್ಮರಣಾ ಸಂಗಮ ಡಿ. 13 ರಂದು ಸುಳ್ಯ ಸುನ್ನಿ ಸೆಂಟರ್ ನಲ್ಲಿ ಶಾಖಾಧ್ಯಕ್ಷ ಸಿದ್ದೀಖ್ ಬಿ.ಎ ಅಧ್ಯಕ್ಷತೆಯಲ್ಲಿ ನಡೆಯಿತು.
ಎಸ್.ಜೆ.ಎಂ ರಾಜ್ಯ ಪ್ರ. ಕಾರ್ಯದರ್ಶಿ ಇಬ್ರಾಹೀಂ ಸಖಾಫಿ ಉದ್ಘಾಟಿಸಿದರು. ಅಬ್ದುರ್ರಶೀದ್ ಝೈನಿ ದುಆ ನೆರವೇರಿಸಿದರು.
ಶಾಖಾ ಪ್ರ. ಕಾರ್ಯದರ್ಶಿ ಬಶೀರ್ ಕಲ್ಲುಮುಟ್ಲು ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. ಕರ್ನಾಟಕ ಮುಸ್ಲಿಂ ಜಮಾಅತ್ ಸುಳ್ಯ ತಾಲೂಕು ಸಂ. ಕಾರ್ಯದರ್ಶಿ ಅಬ್ದುಲ್ ಹಮೀದ್ ಬೀಜಕೊಚ್ಚಿ ಅನುಸ್ಮರಣಾ ಭಾಷಣಗೈದರು. ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಉಪಾಧ್ಯಕ್ಷ ಸಿದ್ದೀಖ್ ಹಿಮಮಿ ಹಾಗೂ ದ.ಕ ಈಸ್ಟ್ ಝೋನ್ ಕಾರ್ಯದರ್ಶಿ ಸಿದ್ದೀಖ್ ಗೂನಡ್ಕ ಸಂಘಟನಾ ತರಬೇತಿ ನೀಡಿದರು. ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಕ್ಯಾಂ. ಕಾರ್ಯದರ್ಶಿ ಶಾಕಿರ್ ಮೊಗರ್ಪಣೆ ವೀಕ್ಷಕರಾಗಿದ್ದರು. ಎಸ್.ವೈ. ಎಸ್ ದ.ಕ ಈಸ್ಟ್ ಜಿಲ್ಲೆ ಸದಸ್ಯ ಸಿದ್ದೀಖ್ ಕಟ್ಟೆಕಾರ್, ಎಸ್.ವೈ.ಎಸ್ ಸುಳ್ಯ ಬ್ರಾಂಚ್ ಪ್ರ. ಕಾರ್ಯದರ್ಶಿ ಹಾರಿಸ್ ಸಿ.ಎ, ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಸದಸ್ಯ ಅಝ್ಹರ್ ಏಣಾವರ ಆಶಂಸಿದರು.

ನೂತನ ಸಮಿತಿ. ರಶೀದ್ ಝೈನಿ (ಅಧ್ಯಕ್ಷ) ಎಂ.ಎಸ್ ಅಶ್ರಫಿ (ಪ್ರ. ಕಾರ್ಯದರ್ಶಿ) ಆಬಿದ್ ಕಲ್ಲುಮುಟ್ಲು (ಕೋಶಾಧಿಕಾರಿ) ಕಮಾಲ್ ಎ.ಬಿ, ನಾಫಿ (ಉಪಾಧ್ಯಕ್ಷರು) ರಿಯಾಝ್, ಅಝಾದ್, ಶಿಬಿಲಿ, ಮುಸ್ತಫಾ, ಸಿಯಾದ್, ರಾಝಿಖ್ (ಕಾರ್ಯದರ್ಶಿಗಳು) ಹಾಗೂ 10 ಕಾರ್ಯಕಾರಿ ಸಮಿತಿ ಸದಸ್ಯರು.
ಬಶೀರ್ ಕಲ್ಲುಮುಟ್ಲು ಸ್ವಾಗತಿಸಿ ನೂತನ ಪ್ರ. ಕಾರ್ಯದರ್ಶಿ ಎಂ.ಎಸ್ ಅಶ್ರಫಿ ವಂದಿಸಿದರು.

85df1357 Ef75 4f8d 837f 96a5dd7b94d7 300x225 79fe7974 9307 4ae9 Bc1f 01570bc5b826 300x208 5e875684 B028 4f96 8697 5bf7da37da59 300x224

Related Articles

Leave a Reply

Your email address will not be published. Required fields are marked *