ಫಿಲೋಮಿನಾ ಕಾಲೇಜಿನಲ್ಲಿ ಕಂಕಣ ಸೂರ್ಯಗ್ರಹಣ ವೀಕ್ಷಣೆ….
ಪುತ್ತೂರು: ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಹವ್ಯಾಸಿ ಖಗೋಳ ವೀಕ್ಷಣಾ ಸಂಘದ ಆಶ್ರಯದಲ್ಲಿ ಕಾಲೇಜಿನಲ್ಲಿ ಗ್ರಹಣ ವೀಕ್ಷಿಸಲು ಬೇಕಾಗುವ ಉಪಕರಣಗಳಾದ ಸೋಲಾರ್ ಫಿಲ್ಟರ್ ಜೋಡಿಸಿದ ದೂರದರ್ಶಕದ ಮೂಲಕ ಕಂಕಣ ಸೂರ್ಯಗ್ರಹಣವನ್ನು ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಾರ್ವಜನಿಕರು ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ಪಿನ್ ಹೋಲ್ ಕ್ಯಾಮರಾ ಮತ್ತು ಸೋಲಾರ್ ಫಿಲ್ಟರ್ ಬಳಸಿದ ಕನ್ನಡಕವನ್ನು ಸಹ ವ್ಯವಸ್ಥೆಗೊಳಿಸಲಾಗಿತ್ತು. ಸೂರ್ಯಗ್ರಹಣದ ವೀಕ್ಷಣೆಗೆ ಸುಮಾರು 500 ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.
ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಡಾ| ಆ್ಯಂಟನಿ ಪ್ರಕಾಶ್ ಮೊಂತೆರೊ, ಕಾಲೇಜಿನ ಪ್ರಾಂಶುಪಾಲ ಪ್ರೊ. ಲಿಯೋ ನೊರೊನ್ಹಾ ಮತ್ತು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಜಯ್ ಲೋಬೋ ಅವರ ಉಪಸ್ಥಿತಿಯಲ್ಲಿ ಪುತ್ತೂರಿನ ಮಹಾವೀರ ಮೆಡಿಕಲ್ ಸೆಂಟರ್‍ನ ವೈದ್ಯ ಡಾ. ಸುರೇಶ್ ಪುತ್ತೂರಾಯ, ಧನ್ವಂತರಿ ಆಸ್ಪತ್ರೆಯ ವೈದ್ಯರಾದ ಡಾ.ರವೀಂದ್ರ ಕೆ, ಡಾ. ರವಿ ಪ್ರಕಾಶ್ ಕೆ, ಸುಳ್ಯದ ಡಾ. ಮೈನಾ, ಡಾ. ಅರ್ಚನಾ, ಪುತ್ತೂರಿನ ವೈದ್ಯರಾದ ಡಾ. ಶಂಕರ ಭಟ್, ಡಾ. ಸುರೇಶ್ ಕುಮಾರ್, ಸುಳ್ಯ ಎನ್ನೆಮ್‍ಸಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಹರಿಣಿ ಪುತ್ತೂರಾಯ, ವಿವೇಕಾನಂದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಹೋಜಕಿ ಡಾ. ವಿಜಯ ಸರಸ್ವತಿ, ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲೆ ರಾಜೇಶ್ವರಿ ನಟ್ಟೋಜ, ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎ ಪಿ ರಾಧಾಕೃಷ್ಣ ಇವರ ಸಂಯೋಜನೆಯಲ್ಲಿ ಆಯೋಜನೆಗೊಂಡ ಈ ಗ್ರಹಣ ವೀಕ್ಷಣೆ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ. ಇ. ದೀಪಕ್ ಡಿ’ಸಿಲ್ವ, ಪ್ರವೀಣ್ ಪ್ರಕಾಶ್ ಡಿ’ಸೋಜ, ವಿಪಿನ್ ನಾೈಕ್ ಎನ್ ಎಸ್, ಆಶಿತ್ ವಿ. ಕೆ, ಸವಿತಾ ಮೊಂತೆರೊ, ಧನ್ಯ ಪಿ. ಟಿ, ವಿದ್ಯಾರ್ಥಿಗಳಾದ ತುಷಾರಾ ಆರ್ ಬಿ, ಮಿಥುನಾ ಪಿ, ರಮ್ಯಶ್ರೀ, ಎಝಿತಾ ಮೊಂತೆರೊ, ನವೀನ್ ಡಿ’ಸೋಜ ಮತ್ತಿತರರು ಉಪಸ್ಥಿತರಿದ್ದರು.