ನಿರಾಶ್ರಿತ ಬಾಣಂತಿ, ಮಗುವಿಗೆ ಆಶ್ರಯ ನೀಡಿದ ನ.ಪಂ.ಸದಸ್ಯ ಶರೀಫ್ ಕಂಠಿ…

ಸುಳ್ಯ: ಗಾಂಧಿನಗರ ಸಮೀಪ ಆಲೆಟ್ಟಿ ರಸ್ತೆಯ ಬದಿಯ ಮರದಡಿಯಲ್ಲಿ ಆಶ್ರಯ ಪಡೆದಿದ್ದ ಅಲೆಮಾರಿ ಜನಾಂಗದ ಮಗು ಮತ್ತು
ಬಾಣಂತಿಯನ್ನು ನ.ಪಂ. ಸದಸ್ಯ ಶರೀಫ್ ಕಂಠಿಯವರು ಮನೆ ಸೇರಿಸಿ ಮಾನವೀಯತೆ ಮೆರೆದ ಘಟನೆ ವರದಿಯಾಗಿದೆ.
ಗಾಂಧಿನಗರ ಆಲೆಟ್ಟಿ ರಸ್ತೆಯ ಬದಿಯಲ್ಲಿರುವ ಮರದಡಿಯಲ್ಲಿ ಹುಣಸೂರು ಮೂಲದ ಶಂಕರ ಹಾಗೂ ಅವರ ಪತ್ನಿ ರಾಧಾ ಎಂಬುವವರು ಮಗಳು ಬಾಣಂತಿ ಮೀನಾ ರೊಂದಿಗೆ ಆಶ್ರಯ ಪಡೆದಿರುವ ವಿಚಾರ ಸಾರ್ವಜನಿಕರಿಂದ ತಿಳಿದ ಶರೀಫ್ ಕಂಠಿಯವರು ವಿಚಾರಿಸಿದಾಗ ನದಿಯಲ್ಲಿ ಮೀನು ಹಿಡಿಯುವ ಬೆಸ್ತ ಜನಾಂಗದ ಅಲೆಮಾರಿ ಕುಟುಂಬದ ಗರ್ಭಿಣಿ ಯುವತಿ ಮಂಗಳೂರಿನ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿ ಎಂಟು ದಿನಗಳ ಬಳಿಕ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿ ಸುಳ್ಯಕ್ಕೆ ಬಂದರೆಂದು ತಿಳಿದುಬಂದಿದೆ. ಅವರು ಸುಳ್ಯ ಪರಿಸರದಲ್ಲಿ ಈ ಹಿಂದೆ ಟೆಂಟ್ ಹಾಕಿ ಇದ್ದುದರಿಂದ ಇದೀಗ ಸುಳ್ಳಕ್ಕೆ ಬಂದಿದ್ದು ಮರದಡಿಯಲ್ಲಿ ಟೆಂಟ್ ಹಾಕದೆಯೇ ಆಶ್ರಯ ಪಡೆದಿದ್ದರೆನ್ನಲಾಗಿದೆ.. ಟೆಂಟ್ ಅಥವಾ ರೂಂ ಮಾಡಲು ಅವರಿಗೆ ಆರ್ಥಿಕ ಶಕ್ತಿ ಇದ್ದಿರಲಿಲ್ಲವೆನ್ನಲಾಗಿದೆ. ಟೆಂಟಿನಲ್ಲಿ ಮಳೆಯ ಕಾರಣ ಇರಲು ಸಾಧ್ಯವಿಲ್ಲದೆ ಇರುವುದರಿಂದ ಶರೀಫ್ ಕಂಠಿಯವರು ಗಾಂಧಿನಗರ ಸಮೀಪವಿರುವ ತಮ್ಮದೇ ಆದ ಬಾಡಿಗೆ ಕೊಠಡಿಗೆ ಅವರನ್ನು ಕರೆದೊಯ್ದು ಆಶ್ರಯ ನೀಡಿದ್ದು, ಜನರ ಪ್ರಶಂಸೆಗೆ ಪಾತ್ರವಾಗಿದೆ.
ಶರೀಫ್ ಕಂಠಿ