ಕಲ್ಲುಗುಂಡಿಯಲ್ಲಿ ಹುದಾ ಕೋರ್ಸ್ ಉದ್ಘಾಟನೆ…

ಸುಳ್ಯ:ಯುವಕರಿಗೆ ಹಾಗೂ ಹಿರಿಯರಿಗೆ ವಿದ್ಯಾರ್ಜನೆಗೆಯ್ಯಲು ಇರುವ ವೇದಿಕೆಯಾದ ಹುದಾ ಕೋರ್ಸ್ ಸುನ್ನೀ ದಅವಾ ವಿಂಗ್ ಪ್ರಾಯೋಜಕತ್ವದಲ್ಲಿ ಉದ್ಘಾಟನೆಗೊಂಡಿದೆ. ಈ ಕೋರ್ಸ್ ನ ಅಧಿಕೃತ ಉದ್ಘಾಟನೆಯನ್ನು ಸಯ್ಯಿದ್ ಉಮರ್ ಜಿಫ್ರಿ ತಂಙಳ್ ನೆರವೇರಿಸಿದರು.
ಮುಸ್ಲಿಂ ಜಮಾಅತ್ ಕಲ್ಲುಗುಂಡಿ ಶಾಖೆಯ ಅಧ್ಯಕ್ಷರಾದ ಹಂಝ ಕೊಯನಾಡು ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಲೀಲ್ ಸಖಾಫಿ ಉಸ್ತಾದರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಉಮರಾ ನಾಯಕರಾದ ಪೀರ್ ಮುಹಮ್ಮದ್, ಸಿರಾಜುಲ್ ಇಸ್ಲಾಂ ಅಸೋಸಿಯೇಶನ್ ಕಲ್ಲುಗುಂಡಿ ಅಧ್ಯಕ್ಷರಾದ ಎ ಕೆ ಇಬ್ರಾಹಿಂ, ಎಸ್ಸೆಸ್ಸೆಫ್ ಕಲ್ಲುಗುಂಡಿ ಶಾಖೆ ಅಧ್ಯಕ್ಷರಾದ ಆಶಿಕ್ ಕೆ ಹೆಚ್, ಎಸ್ ವೈ ಎಸ್ ನಾಯಕರಾದ ಫೈಝಲ್ ಝುಹ್ರಿ ಸಹಿತ ಹಲವು ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಈ ಕೋರ್ಸ್ ಸಂಪೂರ್ಣ ಉಚಿತವಾಗಿದ್ದು, ಪ್ರತಿ ವಾರ ಒಂದು ಗಂಟೆಯ ತರಗತಿ ನಡೆಯಲಿದೆ. ಸಂಶಯ ನಿವಾರಣೆಗೆ ಮುಕ್ತ ಅವಕಾಶವಿರುತ್ತದೆ. ಕೋರ್ಸ್ ಗೆ ಸೇರಲಿಚ್ಚಿಸುವವರು ಕೆಳಗಿನ ನಂಬರ್ ಗೆ ಸಂಪರ್ಕಿಸಬೇಕೆಂದು ಪ್ರಾಯೋಜಕರು ತಿಳಿಸಿದ್ದಾರೆ. 8105708474/91644 22577