ಟಿ.ಎಂ ಶಹೀದ್ ತೆಕ್ಕಿಲ್ ರವರ 54 ನೇ ಹುಟ್ಟುಹಬ್ಬ- ಅರಂತೋಡು ಅಂಗನವಾಡಿ ಕೇಂದ್ರಕ್ಕೆ ಸಿಹಿತಿಂಡಿ ವಿತರಣೆ…

ಸುಳ್ಯ: ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಧಾರ್ಮಿಕ ಸಹಕಾರಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಕಳೆದ ಮೂರುವರೆ ದಶಕಗಳಿಂದ ಕ್ರೀಯಾಶೀಲರಾಗಿರುವ ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ.ಎಂ ಶಹೀದ್ ತೆಕ್ಕಿಲ್ ರವರ 54 ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ಅರಂತೋಡು ಅಂಗನವಾಡಿ ಕೇಂದ್ರಕ್ಕೆ ತೆರಳಿ ಮಕ್ಕಳಿಗೆ ಸಿಹಿತಿಂಡಿ ವಿತರಿಸಿದರು.
ಈ ಸಂದರ್ಭದಲ್ಲಿ ಕೆ.ಡಿ.ಪಿ ಸದಸ್ಯ ಅಶ್ರಫ್ ಗುಂಡಿ, ಅರಂತೋಡು ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಎಸೋಸಿಯೇಶನ್ ಅಧ್ಯಕ್ಷ ಎಸ್.ಎಂ ಅಬ್ದುಲ್ ಮಜೀದ್, ಮಾಜಿ ಅಧ್ಯಕ್ಷ ಎ.ಹನೀಫ್ , ಎಸ್.ಕೆಸ್.ಎಸ್.ಎಫ್ ಶಾಖೆ ಅಧ್ಯಕ್ಷ ಝುಬೈರ್ ಎಸ್.ಇ,ಸಾಮಾಜಿಕ ಕಾರ್ಯಕರ್ತ
ತಾಜುದ್ಧೀನ್ ಅರಂತೋಡು, ಗೂನಡ್ಕ ಎಸ್.ಕೆ.ಎಸ್.ಎಸ್.ಎಫ್ ಕಾರ್ಯದರ್ಶಿ ಹನೀಫ್ ಮೊಟ್ಟೆಂಗಾರ್, ಶಹಬಾಝ್ ಅರಂತೋಡು, ರಹೀಂ ಸುಳ್ಯ, ರಫೀಕ್ ಸುಳ್ಯ, ಅಂಗನವಾಡಿ ಸಹಾಯಕಿ ಜಾನಕಿ ಮೊದಲಾದವರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಹೊನ್ನಮ್ಮ ಟಿ.ಎಂ ಶಹೀದ್ ತೆಕ್ಕಿಲ್ ರವರಿಗೆ ಶುಭವನ್ನು ಕೋರಿ ವಂದಿಸಿದರು.