ಮೂಡುಬಿದಿರೆ-ಬಸದಿ ಪ್ರಾಂಗಣ ಸ್ವಚ್ಛತಾ ಕಾರ್ಯಕ್ರಮ…

ಮೂಡುಬಿದಿರೆ:ಶ್ರೀ ಜೈನ ಕಾಶಿ ಮೂಡುಬಿದಿರೆಯಲ್ಲಿ ಶ್ರೀ ಜೈನ ಮಠ ಹಾಗೂ ಆಳ್ವಾಸ್ ಪದವಿ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳಿಂದ ಅ.2 ರಂದು ಬಸದಿ ಪ್ರಾಂಗಣ ಸ್ವಚ್ಛಗೊಳಿಸುವ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಆಳ್ವಾಸ್ ಉಪನ್ಯಾಸಕರಾದ ವಸಂತ ಎ, ಅಕ್ಷತಾ ಪ್ರಭು,ಕಾರ್ಯಕ್ರಮ ಅಧಿಕಾರಿಗಳು ರಾಷ್ಟ್ರೀಯ ಸೇವಾ ಸಂಸ್ಥೆ ಆಳ್ವಾಸ್ ಪದವಿ ಕಾಲೇಜಿನ ಸುಮಾರು 100 ವಿದ್ಯಾರ್ಥಿಗಳು ಇತಿಹಾಸ ಪ್ರಸಿದ್ದ ಸಾವಿರ ಕಂಬ ಬಸದಿಯ ಸುತ್ತ ಮುತ್ತ ಹುಲ್ಲು ಕಸ ಕಡ್ಡಿ ತೆಗೆದು ಸ್ವಚ್ಛಗೊಳಿಸಿದರು. ಭಾರತ ಹಾಗೂ ರಾಷ್ಟ್ರ ಪಿತಾ ಮಹಾತ್ಮಾ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರೀ ಹುಟ್ಟುಹಬ್ಬದ ದಿನ ಅ.2ರಂದು ಬೆಳಿಗ್ಗೆ ಗಂಟೆ 8.00ರಿಂದ ಮಧ್ಯಾಹ್ನ 12.00ರ ವರೆಗೆ ಸ್ವಚ್ಛತೆ ಕಾರ್ಯಕ್ರಮ ನಡೆಯಿತು.
ಬಸದಿ ಆಡಳಿತದಾರರಾದ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯ ವರ್ಯ ಮಹಾ ಸ್ವಾಮೀಜಿ ಶ್ರೀ ಜೈನ ಮಠ ದಲ್ಲಿ ಮಾತನಾಡಿ ಮಹಾತ್ಮಾ ಗಾಂಧಿ ಸತ್ಯ, ಅಹಿಂಸೆ, ಅಪರಿಗ್ರಹ ಶೀಲ ದೇಶ ಪ್ರೇಮ, ಸ್ವದೇಶಿವಸ್ತುಗಳ ಉಪಯೋಗ ಧರ್ಮ ಸಾಮರಸ್ಯ ಮೊದಲಾದ ಆದರ್ಶವನ್ನು ಪಾಲಿಸಿ ಯುವ ಜನತೆಗೆ ಭೋದಿಸಿ ವ್ರತ ದಂತೆ ಆಚರಿಸಿದವರು. ನಾವೆಲ್ಲರೂ ಶಿಕ್ಷಣ, ಸಹಕಾರ, ಸ್ವಾವಲಂಬನೆ ,ಸ್ವಚ್ಛ ತೆಗೆ ಒತ್ತು ಕೊಟ್ಟು ದೇಶದ ಪ್ರಗತಿಗೆ ಕೊಡುಗೆ ನೀಡುವ ಎಂದು ನುಡಿದು ಆಳ್ವಾಸ್ ಸಂಸ್ಥೆ ಯ ಸಾಮಾಜಿಕ ಕಳಕಳಿಯನ್ನು ಮೆಚ್ಚಿ ಅಭಿನಂದಿಸಿದರು. ಧವಳತ್ರಯ ಜೈನ ಕಾಶಿ ಟ್ರಸ್ಟ್ ವತಿಯಿಂದ ಮಧ್ಯಾಹ್ನದ ಊಟ ವಿತರಣೆ ಮಾಡಲಾಯಿತು. ಹಾಗೂ ಸ್ವಚ್ಛ ಅಭಿಯಾನ ದಲ್ಲಿ ಪಾಲ್ಗೊಂಡು ಕಾರ್ಯಕ್ರಮ ದ ಯಶಸ್ಸಿಗೆ ಶ್ರಮಿಸಿದ ಆಳ್ವಾಸ್ ಸಂಸ್ಥೆಗೆ ಎನ್ ಎಸ್ ಎಸ್ ಸೇವಾ ನಿರತ ವಿದ್ಯಾರ್ಥಿ ವೃಂದಕ್ಕೆ ಅಭಿನಂದಿಸಿ, ಹರಸಿದರು. ವ್ಯವಸ್ಥಾಪಕ ಸಂಜಯಂತ ಕುಮಾರ್ ಶೆಟ್ಟಿ, ಶ್ರೀ ಜೈನ ಮಠ ವಂದಿಸಿದರು.

whatsapp image 2024 10 02 at 9.04.13 pm

Sponsors

Related Articles

Back to top button