ಶ್ರೀಕೃಷ್ಣ ಶಿಶು ಮಂದಿರ ಕಂದೂರು -ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆ…
ಬಂಟ್ವಾಳ: ಶ್ರೀಕೃಷ್ಣ ಶಿಶು ಮಂದಿರ ಕಂದೂರು ಸಜೀಪ ಮೂಡ ಇಲ್ಲಿಗೆ ಯುವಶಕ್ತಿ ಸೇವಾಪದ ವತಿಯಿಂದ ಕೊಡ ಮಾಡಲ್ಪಟ್ಟ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆಯನ್ನು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೆರವೇರಿಸಿದರು.
ಕರ್ನಾಟಕ ರಾಜ್ಯದಲ್ಲಿ ಶಿಶು ಮಂದಿರ ಆರಂಭಿಸಿದ ಅಜಿತ್ ಕುಮಾರ್ ಪುಣ್ಯತಿಥಿ ಅಂಗವಾಗಿ ಅವರ ಸೇವ ಕಾರ್ಯವನ್ನು ಲಕ್ಷ್ಮೀನಾರಾಯಣ ಭಟ್ ಪದ್ಯಾಣ ಸ್ಮರಿಸಿದರು. ಸ್ಕಾಡ್ಸ್ ಅಧ್ಯಕ್ಷ ಕೆ ರವೀಂದ್ರ ಕಂಬಳಿ ಅಧ್ಯಕ್ಷತೆ ವಹಿಸಿದ್ದರು. ಕೆನರಾ ಬ್ಯಾಂಕ್ ಸೀನಿಯರ್ ಆಫೀಸರ್ ರಮೇಶ್ ನಾಯಕ್, ಗುರುದೇವಾನಂದ ಸಹಕಾರಿ ಸಂಘ ನಿರ್ದೇಶಕರಾದ ಅಶೋಕ್ ಕುಮಾರ್, ಯುವಶಕ್ತಿ ಸೇವಾ ಪದದ ಪ್ರವೀಣ್, ರಂಜಿತ ಸುವರ್ಣ, ದಿನೇಶ್ ಬಡೆಗೋಡು, ಶಿಶುಮಂದಿರದ ಪದಾಧಿಕಾರಿಗಳಾದ ಜಯಶಂಕರ ಬಾಸ್ರಿತ್ತಾಯ, ಸುಬ್ರಾಯ ಕಾರoತ, ಸುರೇಶ್ ಬಂಗೇರ, ವಿಜಯಲಕ್ಷ್ಮಿ, ಸೋಮನಾಥ ಸುಮತಿ, ರತ್ನಾವತಿ, ಅನಿತಾ ಮಾತಾಜಿ ರಕ್ಷಿತ ಮೊದಲಾದವರು ಉಪಸ್ಥಿತರಿದ್ದರು.