ತುಂಬೆ ನೂತನ ಡ್ಯಾಮ್ ನಲ್ಲಿ ಜಲಮಟ್ಟ ಕಾಯ್ದುಕೊಳ್ಳುವಂತೆ ಶಾಸಕರಿಗೆ ಹಾಗೂ ತಹಶೀಲ್ದಾರ್ ಅವರಿಗೆ ಲಿಖಿತ ಮನವಿ…
ಬಂಟ್ವಾಳ: ಮಂಗಳೂರಿಗೆ ಕುಡಿಯುವ ನೀರು ಸರಬರಾಜಿಗಾಗಿ ನೇತ್ರಾವತಿ ನದಿಗೆ ತುಂಬೆಯಲ್ಲಿ ನಿರ್ಮಿಸಲಾದ ನೂತನ ಡ್ಯಾಮ್ ನಲ್ಲಿ ಆರು ಮೀಟರ್ ನೀರು ಸಂಗ್ರಹಿಸುವುದಾಗಿ ಮುಳುಗಡೆ ಪ್ರದೇಶಕ್ಕೆ ಪರಿಹಾರ ನೀಡಿ ಇದೀಗ ಯಾವುದೇ ಪೂರ್ವ ಸೂಚನೆ ನೀಡದೆ 6:30 ಮೀಟರಿಗೂ ಅಧಿಕ ನೀರು ಸಂಗ್ರಹಿಸಿದ್ದು, ರೈತರು ಆತಂಕಕ್ಕೊಳಗಾಗಿದ್ದಾರೆ. ತುಂಬೆ ಡ್ಯಾಮಿನಲ್ಲಿ ಜಲಮಟ್ಟ ಕಾಯ್ದಕೊಳ್ಳದೆ ಇರುವುದರಿಂದ ಸಾರ್ವಜನಿಕರು, ಜಾನುವಾರು ಸಹಿತ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ರೈತರು ಬೆಳೆಸಿದ ಬೆಳೆ ನಿರುಪಾಲಾಗುತ್ತಿದೆ. ಆದುದರಿಂದ ಆರು ಮೀಟರ್ ಗಿಂತ ಹೆಚ್ಚು ನೀರು ನಿಲ್ಲಿಸುವ ಇರಾದೆ ಜಿಲ್ಲಾ ಆಡಳಿತಕ್ಕೆ ಇದ್ದರೆ ಮುಂಚಿತವಾಗಿ ತಿಳಿಸಿ ಸಂತ್ರಸ್ತ ರೈತರಿಗೆ ಕೇಂದ್ರ ಜಲ ಆಯೋಗ ತಿಳಿಸಿದಂತೆ ವರತೆ ಪ್ರದೇಶಕ್ಕೆ ಸೇರಿಸಿ ಮುಳುಗಡೆ ಪ್ರದೇಶಕ್ಕೆ ನ್ಯಾಯೋಚಿತ ಸೂಕ್ತ ಪರಿಹಾರ ನೀಡಿ ನೀರು ಸಂಗ್ರಹಿಸಿ ರೈತರ ಹಿತಾಸಕ್ತಿ ಕಾಪಾಡಬೇಕು. ಅನ್ನದಾತನ ಸಂಕಷ್ಟವನ್ನು ಪರಿಹರಿಸುವಂತೆ ಬಂಟ್ವಾಳ ಶಾಸಕರಿಗೆ ಹಾಗೂ ಬಂಟ್ವಾಳ ತಹಶೀಲ್ದಾರ್ ಅವರಿಗೆ ತುಂಬೆ ಡ್ಯಾಮ್ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಎಂ ಸುಬ್ರಹ್ಮಣ್ಯ ಭಟ್ ಅವರು ಲಿಖಿತ ಮನವಿಯನ್ನು ನೀಡಿ ರೈತರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.