ಗೂನಡ್ಕ ದರ್ಕಾಸ್ ಪೆಲ್ತಡ್ಕ ರಸ್ತೆ ಮತ್ತು ಮೂಲಭೂತ ಸೌಕರ್ಯಕ್ಕಾಗಿ ಟಿ ಎಂ ಶಾಹೀದ್ ತೆಕ್ಕಿಲ್ ರವರಿಗೆ ಮನವಿ…
ಸುಳ್ಯ : ಸಂಪಾಜೆ ಗ್ರಾಮದ ಗೂನಡ್ಕ ದರ್ಕಾಸ್ ಪೆಲ್ತಡ್ಕ ಪ್ರದೇಶದಲ್ಲಿ ಸುಮಾರು 250 ಮನೆಗಳಿದ್ದು ಮೂಲಭೂತ ಸೌಕರ್ಯ ಹಾಗು ಸಮರ್ಪಕ ರಸ್ತೆ ಇಲ್ಲದೆ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತಿದ್ದು, ಈ ಬಗ್ಗೆ ಊರಿನ ಪ್ರಮುಖರುಗಳಾದ ಕೃಷಿಕ ಸತ್ಯನಾರಾಯಣ ಭಟ್, ನಿವೃತ್ತ ಕೆ ಎಸ್ ಆರ್ ಟಿ ಸಿ ಉದ್ಯೋಗಿ ಜಗನ್ನಾಥ್ ಗೌಡ ಪೆಲ್ತಡ್ಕ, ಗೂನಡ್ಕ ಮಸೀದಿಯ ಅಧ್ಯಕ್ಷರಾದ ಕೃಷಿಕ ಅಬ್ದುಲ್ಲ ಕೊಪ್ಪತಕಜೆ, ಮದೆನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗು ಸಂಪಾಜೆ ಗ್ರಾಮ ಪಂಚಾಯತ್ ನ ಹಿರಿಯ ಸದಸ್ಯರಾದ ಅಬುಸಾಲಿ ಗೂನಡ್ಕ ನೇತೃತ್ವದಲ್ಲಿ ಊರವರ ಮನವಿಯನ್ನು ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷರಾದ ಹಿರಿಯ ರಾಜಕೀಯ ಧುರೀಣ ಟಿ ಎಂ ಶಾಹೀದ್ ತೆಕ್ಕಿಲ್ ರವರಿಗೆ ಅವರ ತೆಕ್ಕಿಲ್ ನಿವಾಸದಲ್ಲಿ ಸಲ್ಲಿಸಿದರು. ಜನ ಪ್ರತಿನಿಧಿ ಅಲ್ಲದಿದ್ದರೂ ಗೂನಡ್ಕ, ಪೇರಡ್ಕ, ಸಂಪಾಜೆ ಗ್ರಾಮಕ್ಕೆ ಮತ್ತು ಸುಳ್ಯ ತಾಲೂಕಿಗೆ ಮಾಡಿದ ಅನೇಕ ಅಭಿವೃದ್ದಿ- ಸಮಾಜ ಸೇವೆ ಬಗ್ಗೆ ನಿಯೋಗ ಶ್ಲಾಘಿಸಿ, ಧನ್ಯವಾದ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಟಿ ಎಂ ಶಾಹೀದ್ ತೆಕ್ಕಿಲ್ ರವರು ಆದಷ್ಟು ಭೇಗ ರಸ್ತೆ ಕಾಮಗಾರಿಗೆ ಮತ್ತು ಮೂಲಭೂತ ಸೌಕರ್ಯಕ್ಕೆ ಅನುದಾನ ಒದಗಿಸಿ ಕೊಡುವುದಾಗಿ ತಿಳಿಸಿದ್ದಾರೆ ಎಂದು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಅಬೂಸಾಲಿ ಗೂನಡ್ಕ ತಿಳಿಸಿದ್ದಾರೆ.