ಸುಳ್ಯ ತಾಲೂಕು ಕರ್ನಾಟಕ ಜರ್ನಲಿಸ್ಟ್‌ ಯೂನಿಯನ್‌ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ…

ಸುಳ್ಯ: ಸುಳ್ಯ ತಾಲೂಕು ಕರ್ನಾಟಕ ಜರ್ನಲಿಸ್ಟ್‌ ಯೂನಿಯನ್‌ ನ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭ
ಹಾಗೂ ಸದಸ್ಯರಿಗೆ ಕಿಟ್‌ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮವು ಸೆ.28 ರಂದು ನಡೆಯಿತು.
ಕೆ.ಜೆ.ಯು.ತಾಲೂಕು ಅಧ್ಯಕ್ಷ ಉಮೇಶ್‌ ಮಣಿಕ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆ.ಜೆ.ಯು .ಜಿಲ್ಲಾಧ್ಯಕ್ಷ ಹರೀಶ್‌ ಬಂಟ್ವಾಳ್‌ ಪದಪ್ರದಾನ ನೆರವೇರಿಸಿದರು.
ಈ ಸಾಲಿನ ನೂತನ ಅಧ್ಯಕ್ಷರಾದ ಜೆ.ಕೆ.ರೈ,ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್‌ ಆಲೆಟ್ಟಿ ,ಕೋಶಾಧಿಕಾರಿ ಶಿವರಾಮ ಕಜೆಮೂಲೆ ತಂಡಕ್ಕೆ ಅಧಿಕಾರ ಹಸ್ತಾಂತರ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಪೋಲಿಸ್‌ ನೇಮಕಾತಿಗಾಗಿ ನಗದು ಬಹುಮಾನ ಘೋಷಣೆ ಮಾಡಿರುವ ಬೆಳ್ಳಾರೆ ಪೋಲಿಸ್‌
ಠಾಣೆಯ ಸಬ್‌ ಇನ್‌ ಸ್ಪೆಕ್ಟರ್‌ ಆಂಜನೇಯ ರೆಡ್ಡಿಯವರನ್ನು ಸನ್ಮಾನಿಸಲಾಯಿತು.ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ.ಶಿವಾನಂದರು ಆಗಮಿಸಿ ಗಾಂಧಿ ಜಯಂತಿ ಆಚರಣೆ ಮತ್ತು ಗಾಂಧಿ ಗಾಮ ಸ್ವರಾಜ್ ರಥದ ಬಗ್ಗೆ ಮಾತನಾಡಿದರು.
ವೇದಿಕೆಯಲ್ಲಿ ಬೆಳ್ಳಾರೆ ಪೊಲೀಸ್‌ ಠಾಣೆಯ ಉಪನಿರೀಕ್ಷಕ ಆಂಜನೇಯ ರೆಡ್ಡಿ, ದಕ.ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಸುಳ್ಯ ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪಿ.ಎಸ್‌.ಗಂಗಾಧರ್‌, ಜೆ.ಡಿ.ಎಸ್‌.ಪ್ರಧಾನ ಕಾರ್ಯದರ್ಶಿ ರಾಕೇಶ್‌ ಕುಂಟಿಕಾನ,ಕೆ.ಜೆ.ಯು ಕೋಶಾಧಿಕಾರಿ ಶ್ರೀಧರ್‌ ಕಜೆಗದ್ದೆ, ಕಾರ್ಯದರ್ಶಿ ಯಶ್ವಿತ್‌ ಕಾಳಮ್ಮನೆ ಉಪಸ್ಥಿತರಿದ್ದರು.

Related Articles

Back to top button