ತೆಕ್ಕಿಲ್ ಪ್ರತಿಷ್ಠಾನ ವತಿಯಿಂದ ಉದ್ಯಮಿ ಅಶ್ರಫ್ ನಾಯ್ ಮಾರ್ ಮೂಲ(ಅಚ್ಚು) ರವರಿಗೆ ಸನ್ಮಾನ…
ಸುಳ್ಯ: ಕೇರಳದ ಗಡಿ ಜಿಲ್ಲೆ ಕಾಸರಗೋಡಿನ ಸುಗಂಧ ದ್ರವ್ಯ ವ್ಯಾಪಾರಿ ಹಾಗೂ ರಿಯಲ್ ಎಸ್ಟೇಟ್ ಯುವ ಉದ್ಯಮಿ ಹಾಗು ಸಮಾಜ ಸೇವಕ ಅಶ್ರಫ್ ನಾಯ್ ಮಾರ್ ಮೂಲ(ಅಚ್ಚು)ರವರು ಅರಂತೋಡು ತೆಕ್ಕಿಲ್ ಪ್ರತಿಷ್ಠಾನಕ್ಕೆ ಮತ್ತು ಗೂನಡ್ಕ ತೆಕ್ಕಿಲ್ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅವರನ್ನು ತೆಕ್ಕಿಲ್ ಮಾದರಿ ಶಾಲೆಯ ಗೂನಡ್ಕ ಇದರ 18 ವಾರ್ಷಿಕೋತ್ಸವ ‘ಬ್ಲೋಸಂ 2K24’ ಸಮಾರಾಭದಲ್ಲಿ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ರವರು ಶಾಲು, ಹಾರ, ಸನ್ಮಾನಪತ್ರ, ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿದರು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಟಿ.ಎಂ ಶಹೀದ್ ತೆಕ್ಕಿಲ್ ರವರು ಗ್ರಾಮಿಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಹಲವಾರು ವಿದ್ಯಾರ್ಥಿಗಳಿಗೆ ವಿದ್ಯಾದಾನವನ್ನು ಮಾಡುತ್ತಿದ್ದಾರೆ. ಅವರು ಸಾಮಾಜಿಕ,ರಾಜಕೀಯ, ಧಾರ್ಮಿಕ, ಚಟುವಟಿಕೆಗಳೊಂದಿಗೆ ಉತ್ತಮ ಸತ್ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಅಭಿನಂದನೀಯ. ಶಿಕ್ಷಣ ಸಂಸ್ಥೆಯ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಬಹಳ ದೊಡ್ಡದು. ಕಾಲಕಾಲಕ್ಕೆ ವಿದ್ಯಾರ್ಥಿಗಳ ಶಾಲಾ ಶುಲ್ಕಗಳನ್ನು ಪೋಷಕರು ಭರಿಸಬೇಕು ಮತ್ತು ವಿದ್ಯಾರ್ಥಿಗಳು ಶಾಲೆಗೆ ಹೋಗುವ ಮತ್ತು ಬರುವ ಸಮಯದ ಬಗ್ಗೆ ನಿಗಾ ವಹಿಸಬೇಕೆಂದರು. ಈಗಾಗಲೇ ನಾನು ಈ ಸಂಸ್ಥೆಗೆ 3 ಕಂಪ್ಯೂಟರ್ ಗಳನ್ನು ನೀಡಿರುತ್ತೇನೆ ಮತ್ತು ಮುಂದೆಯು ಸಹಕಾರ ನೀಡುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ, ತೆಕ್ಕಿಲ್ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ, ಕೋಶಾಧಿಕಾರಿ ಟಿ.ಎಂ ಜಾವೇದ್ ತೆಕ್ಕಿಲ್, ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಸವಾದ್ ಸುಳ್ಯ, ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ| ಉಮ್ಮರ್ ಬೀಜದಕಟ್ಟೆ, ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹನೀಫ್ ಎಸ್.ಕೆ. ಸಂಪಾಜೆ, ತಾಲೂಕು ಭೂ ನ್ಯಾಯ ಮಂಡಳಿಯ ಮಾಜಿ ಸದಸ್ಯ ಹಾಜಿ ಪಿ.ಪಿ ಉಮ್ಮರ್ ಗೂನಡ್ಕ, ತೆಕಿಲ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಉನೈಸ್ ಪೆರಾಜೆ, ಗೌರವಾಧ್ಯಕ್ಷ ತಾಜ್ ಮೊಹಮ್ಮದ್ ಸಂಪಾಜೆ, ಶಾಲಾ ಮುಖ್ಯೋಪಾಧ್ಯಾಯ ಸಂಪತ್, ಅಬ್ದುಲ್ ಖಾದರ್ ಮೊಟ್ಟೆಂಗಾರ್ ವಿಧ್ಯಾರ್ಥಿ ನಾಯಕ ಉವೈಸ್ ಗೂನಡ್ಕ ಮೊದಲಾದವರು ಉಪಸ್ಥಿತರಿದ್ದರು.