ಸಂಪಾಜೆ ಗ್ರಾಮ ಪಂಚಾಯತ್ – ಮಕ್ಕಳ ಗ್ರಾಮ ಸಭೆ…
ಸುಳ್ಯ: ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮತಿ ಶಕ್ತಿವೇಲು ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಬಾಭವನದಲ್ಲಿ ಮಕ್ಕಳ ಗ್ರಾಮ ಸಭೆ ನಡೆಯಿತು.
ತಾಲೂಕು ಅರೋಗ್ಯ ಶಿಕ್ಷಣ ಅದಿಕಾರಿ ಶ್ರೀಮತಿ ಪ್ರಮೀಳಾ ರವರು ಮಾನಸಿಕ ಅರೋಗ್ಯ, ಪೌಷ್ಟಿಕ ಆಹಾರ ಹಾಗೂ ಮಾದಕ ವ್ಯಸನದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಶಾಲಾ ಪರಿಸರದಲ್ಲಿ ತಂಬಾಕು ಮಾರಾಟ ಮಕ್ಕಳಿಗೆ ಮಿಠಾಯಿ ಇನ್ನಿತರ ರೂಪದಲ್ಲಿ ಮಾದಕ ವಸ್ತುಗಳ ಮಾರಾಟ ಮಾಡಿದಾಗ ತಕ್ಷಣ ಪೊಲೀಸ್ ಇನ್ನಿತರ ಇಲಾಖೆಯ ಗಮನಕ್ಕೆ ತನ್ನಿ. ಯಾರು ಕೂಡ ಮಾನಸಿಕ ಖಿನ್ನತೆಗೆ ಒಳಗಾಗದೆ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು. ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ಹೆಚ್ಚಾಗಿ ಆಗಬೇಕು ಎಂದರು.
ಡಾ. ಜಯಶ್ರೀ ಆಯರ್ವೇದಿಕ್ ಔಷದಿ ಹಾಗೂ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು. ಮಕ್ಕಳಿಂದ ವಿವಿಧ ಪ್ರಶ್ನೆ ಕೇಳಿ ಉತ್ತರ ನೀಡಿದವರಿಗೆ ಬಹುಮಾನ ನೀಡಲಾಯಿತು.ಅಂಗನವಾಡಿ ಮೇಲ್ವಿಚಾರಕಿ ದೀಪಿಕಾ ಮಹಿಳಾ ಮತ್ತು ಮಕ್ಕಳ ಇಲಾಖೆಯ ಬಗ್ಗೆ ಮಾಹಿತಿಯನ್ನು ನೀಡಿದರು.
ಮಾಜಿ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಮಕ್ಕಳ ಬೇಡಿಕೆಯ ಪ್ರಶ್ನೆ ಬಗ್ಗೆ ಸಭೆಯಲ್ಲಿ ಮಂಡಿಸಿದರು ಹಾಗೂ ಉತ್ತರಿಸಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಸುಂದರಿ ಮುಂಡಡ್ಕ, ವಿಮಲಾ ಪ್ರಸಾದ್,ಕಾರ್ಯದರ್ಶಿ ಪದ್ಮಾವತಿ ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜಾ ಸ್ವಾಗತಿಸಿ, ಮಕ್ಕಳ ಗ್ರಾಮ ಸಭೆ ಬಗ್ಗೆ ತಿಳಿಸಿದರು. ಕಾಂತಿ ಬಿ. ಎಸ್. ಕಾರ್ಯಕ್ರಮ ನಿರೂಪಿಸಿದರು.
ಉಪಾಧ್ಯಕ್ಷರಾದ ಎಸ್. ಕೆ. ಹನೀಫ್ ವಂದಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ರಸ್ತೆ, ಚರಂಡಿ, ಕ್ರೀಡಾಕೂಟ ಸಾಮಗ್ರಿ, ಬೆಂಚು, ಡೆಸ್ಕು, ಸುಳ್ಯ- ಕೊಯ್ನಾಡ್ ಬಸ್ ಅರ್ಧ ಗಂಟೆಗೆ ಒಂದರಂತೆ ಬೇಕು. ಕಡೆಪಾಲ ಬಳಿ ಸರಕಾರಿ ಬಸ್ ಸ್ಟಾಪ್ ಕೊಡದಿರುವ ಬಗ್ಗೆ, ಶಾಲಾ ಬಳಿ ಬೀದಿ ದೀಪ, ಶಾಲಾ ಪರಿಸದಲ್ಲಿ ತಂಬಾಕು ವಸ್ತುಗಳ ಮಾರಾಟ, ಕಲ್ಲುಗುಂಡಿ ಸರಕಾರಿ ಶಾಲಾ ಬಳಿ ಸ್ವಚ್ಛತೆಗೆ ಸಮಸ್ಯೆ, ಬೀದಿ ನಾಯಿ, ದನದ ಹಾವಳಿ, ಕಾಡು ಪ್ರಾಣಿಗಳಿಂದ ಶಾಲೆಗೆ ಬರಲು ಭಯ, ಸಾರ್ವಜನಿಕ ಟಾಯ್ಲೆಟ್ ಸ್ವಚ್ಛತೆ ಸೇರಿದಂತೆ ಹಲವು ವಿಚಾರಗಳ ವಿನಿಮಯ ನಡೆಸಿದರು. ಕಾರ್ಯಕ್ರಮಕ್ಕೆ ಶಾಲಾ ಮುಖ್ಯಗುರುಗಳು, ಶಾಲಾ ಆಡಳಿತ ಮಂಡಳಿ ಅಧ್ಯಕ್ಷರುಗಳು, ಅಂಗನವಾಡಿ ಆಶಾ, ಅರೋಗ್ಯ ಕಾರ್ಯಕರ್ತರು, ಕಮ್ಯುನಿಟಿ ಹೆಲ್ತ್ ಆಫೀಸರ್ ಉಪಸ್ಥಿತರಿದ್ದರು.