ಸೋಲಾರ್ ಹೈಮಾಸ್ಟ್ ದೀಪದ ಉದ್ಘಾಟನೆ…

ಸುಳ್ಯ: ಸಂಪಾಜೆ ಬದ್ರಿಯಾ ಜುಮ್ಮಾ ಮಸೀದಿ ಮುಂಬಾಗ ವಿಧಾನ ಪರಿಷತ್ ಸದಸ್ಯರಾದ ನಸಿರ್ ಅಹ್ಮದ್ ಅನುದಾನದಲ್ಲಿ ಸುಮಾರು 1ಲಕ್ಷ ರೂಪಾಯಿ ವೆಚ್ಚದ ಸೋಲಾರ್ ಹೈಮಾಸ್ಟ್ ದೀಪದ ಉದ್ಘಾಟನೆಯನ್ನು ಕರ್ನಾಟಕ ಸರ್ಕಾರದ ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ ಸಲಹಾ ಸಮಿತಿ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿಧಾನ ಪರಿಷತ್ ಸದಸ್ಯರಾದ ನಸಿರ್ ಅಹ್ಮದ್ ಅನುದಾನದಲ್ಲಿ ಈ ಭಾಗದಲ್ಲಿ ಬಹಳಷ್ಟು ಅಭಿವೃದ್ಧಿ ಆಗಿದೆ. ಗಡಿಕಲ್ಲು ಅಂಗನವಾಡಿ ಕೇಂದ್ರ ಕಟ್ಟಡಕ್ಕೆ ಅನುದಾನ, ಪೇರಡ್ಕ ಹಾಗೂ ಕಲ್ಲುಗುಂಡಿ ಮುಹಿಯುದ್ದೀನ್ ಜುಮ್ಮಾ ಮಸೀದಿಯ ಬಳಿ ಸೋಲಾರ್ ಹೈಮಾಸ್ಟ್ ದೀಪದ ಉದ್ಘಾಟನೆಯನ್ನು ಕೂಡಾ ನಾವು ನೆರವೇರಿಸಿದ್ದೇವೆ. ಮುಂದೆ ಗ್ರಾಮದ ಹೆಚ್ಚಿನ ಕಡೆ ಸೋಲಾರ್ ಹೈಮಾಸ್ಟ್ ದೀಪ ಅಳವಡಿಸುತ್ತೇವೆ. ಈಗಾಗಲೇ ಸಂಪಾಜೆ ಗ್ರಾಮದ ಮುಂಡಡ್ಕ, ಚಟ್ಟೆಕಲ್ಲು,ದಂಡೆಕಜೆ , ಪೆರುಂಗೊಡಿ, ದರ್ಕಾಸ್ ಕೊಪ್ಪತಕಜೆ ರಸ್ತೆ ಕಾಂಕ್ರಿಟ್ ಕಾಮಗಾರಿಗೆ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ವಿಶೇಷ ಅನುದಾನದಲ್ಲಿ ಒಂದು ಕೋಟಿ ಮಂಜೂರಾಗಿ ಟೆಂಡರ್ ಕೂಡ ಆಗಿದೆ ಶೀಘ್ರ ಕೆಲಸ ನಡೆಯಲಿದೆ ಅಲ್ಲದೆ ಅಲ್ಪಸಂಖ್ಯಾತರ ರಸ್ತೆ ಅಭಿವೃದ್ಧಿ ಯೋಜನೆಯಡಿ ಸಚಿವರಾದ ಜಮೀರ್ ಅಹಮದ್ ಮೂಲಕ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ ಮುಖಾಂತರ ದರ್ಕಾಸ್, ಪೆರುಂಗೊಡಿ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಮೂಲಕ ಚಟ್ಟೆಕಲ್ಲು ರಸ್ತೆ ಕಾಮಗಾರಿ ನಡೆಯಲಿದೆ ಎಂದರು . ವಿವಿಧ ಯೋಜನೆಯಡಿ ಸಂಪಾಜೆ ಗ್ರಾಮದ ಎಲ್ಲಾ ರಸ್ತೆ ಕಾಂಕ್ರಿಟ್ ಕಾಮಗಾರಿಗೆ ವಿಶೇಷ ಪ್ರಯತ್ನ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎಸ್ ಕೆ ಹನೀಫ್, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ, ಕಾಂಗ್ರೆಸ್ ಮುಖಂಡರಾದ ಮೂಸಾ ಕುಂಞಿ, ವಕೀಲರು, ಶರೀಫ್ ಕಂಠಿ, ಸಿದ್ದೀಕ್ ಕೊಕ್ಕೊ ಸಂಪಾಜೆ ಜುಮಾ ಮಸೀದಿ ಅಧ್ಯಕ್ಷರಾದ ಮಹಮ್ಮದ್ ಹಮೀದಿಯ, ಸದಸ್ಯರಾದ ಎಸ್ ಪಿ , ಅಬ್ದುಲ್ ರಹಿಮಾನ್, ಸುಳ್ಯ ತಾಲೂಕಿನ ಮದ್ರಸಾ ಮೇನೇಜ್ ಮೆಂಟ್ ಅಧ್ಯಕ್ಷರಾದ ತಾಜ್ ಮಹಮ್ಮದ್, ಸಾಮಾಜಿಕ ಕಾರ್ಯಕರ್ತ ಸಮೀರ್ ತಾಜ್, ಸಾದಿಕ್ ಚಟ್ಟೆಕಲ್ಲು ಉಪಸ್ಥಿತರಿದ್ದರು.