ಭಾಷೆ ಸಂಸ್ಕೃತಿ ಉಳಿಸಲು ನಾಟಕಗಳು ಸಹಕಾರಿ-ರುಕ್ಮಯ ಪೂಜಾರಿ….
ಬಂಟ್ವಾಳ: ತುಳುಭಾಷೆ ಸಂಸ್ಕೃತಿ ಉಳಿಸಲು ತುಳು ನಾಟಕಗಳು ಸಹಕಾರಿಯಾಗಿವೆ. ತುಳುನಾಡಿನ ಜನಪದ ಜೀವನ ಮತ್ತು ವೈವಿಧ್ಯ ಬದುಕಿನ ಚಿತ್ರಣ ನಾಟಕಗಳ ಮೂಲಕ ಪ್ರದರ್ಶನವಾಗುತ್ತದೆ ಎಂದು ಮಾಜಿ ಶಾಸಕ ಎ. ರುಕ್ಮಯ ಪೂಜಾರಿ ಹೇಳಿದರು.
ಅವರು ತುಳುವ ಚಾವಡಿ ದಾಸಕೋಡಿ ಸಾದರ ಪಡಿಸಿದ ಚಾವಡಿ ಕಲಾವಿದೆರ್ ಕುಡ್ಲ ರಂಗ ಭೂಮಿ ಕಲಾವಿದರ ಕೂಡುವಿಕೆಯಿಂದ ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ಏರ್ಪಡಿಸಲಾದ ಬಿ.ಆರ್.ಕಬಕ ಅವರ 27ನೇ ಕಲಾಕೃತಿ ಅರುಣ್‍ಚಂದ್ರ ಬಿ.ಸಿ.ರೋಡು ನಿರ್ದೇಶನದ ‘ನಾಲಾಯಿಡ್ ಕುಲ್ಲೆರಾಪುಜಿ’ ಎಂಬ ತುಳು ಹಾಸ್ಯಮಯ ನಾಟಕದ ಪ್ರಥಮ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ಶ್ರೀನಿವಾಸ ಇಂಜಿನಿಯರಿಂಗ್ ಕಾಲೇಜಿನ ಸಂದರ್ಶಕ ಪ್ರಾಧ್ಯಾಪಕ ಜಯಾನಂದ ಪೆರಾಜೆ ಮುಖ್ಯ ಅತಿಥಿಯಾಗಿದ್ದರು. ಜಿ.ಪಂ. ಸದಸ್ಯ ಚೆನ್ನಪ್ಪ ಕೋಟ್ಯಾನ್, ಜ್ಯೋತಿಷಿ ಭಾಸ್ಕರ ಬಂಗೇರ ಪದಂಗಡಿ, ಸಿವಿಲ್ ಕಂಟ್ರಾಕ್ಟರ್ ಪುಷ್ಪರಾಜ ಶೆಟ್ಟಿಗಾರ್, ಮಹಾಬಲ ದಾಸಕೋಡಿ , ದಿನೇಶ್ ಅಮ್ಟೂರು , ಭುವನೇಶ್ ಪಚಿನಡ್ಕ, ರಾಧಾಕೃಷ್ಣ ಅಡ್ಯಂತಾಯ, ರತ್ನಾಕರ ಶೆಟ್ಟಿ ಕಲ್ಲಡ್ಕ , ಛಾಯಾಗ್ರಾಹಕ ಸಂಘದ ಬಂಟ್ವಾಳ ವಲಯ ಅಧ್ಯಕ್ಷ ಕುಮಾರ ಸ್ವಾಮಿ, ಅರುಣಚಂದ್ರ ಬಿ.ಸಿ.ರೋಡು , ಮಂಜು ವಿಟ್ಲ , ಬಿ.ಆರ್.ಕಬಕ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾಜಿ ಯೋಧರಾದ ಸತೀಶ್ ಸುವರ್ಣ ಪಿ., ಬಿ.ಶ್ರೀನಿವಾಸ ಶೆಟ್ಟಿ, ಸಮಾಜ ಸೇವಕರಾದ ರಮೇಶ್ ನೂಜಿಪ್ಪಾಡಿ, ಉದ್ಯಮಿ ಡಾ.ಎಸ್.ಎಮ್ ಗೋಪಾಲಕೃಷ್ಣ ಅಚಾರ್ಯ ಇವರನ್ನು ಸನ್ಮಾನಿಸಲಾಯಿತು.