ಬಂಟ್ವಾಳ ಬ್ಲಾಕ್ ಕಾಂಗ್ರೆಸ್ – ಕರಾವಳಿ ಪ್ರಜಾಧ್ವನಿ ಯಾತ್ರೆ…

ಬಂಟ್ವಾಳ : 40 ಪರ್ಸೆಂಟ್ ಸರಕಾರವನ್ನು ಕಿತ್ತೊಗೆಯಲು ಕರ್ನಾಟಕದ ಜನ ನಿರ್ಧರಿಸಿ ಆಗಿದೆ. ಈ ಬಾರಿ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ನಿಶ್ಚಿತ. ಪ್ರತಿಯೊಂದು ಕೆಲಸಗಳಿಗೂ ಲಂಚ, ಪರ್ಸೆಂಟೇಜ್ ನೀಡಬೇಕಾದ ಅನಿವಾರ್ಯತೆ ರಾಜ್ಯದ ಜನತೆಗೆ ಉಂಟಾಗಿದ್ದು, ಇಂತಹ ಕೆಟ್ಟ ಸರಕಾರವನ್ನು ಕೆಳಗಿಸುವ ತಾಕತ್ತು ಇರುವ ಏಕೈಕ ಪಕ್ಷ ಅದು ಕಾಂಗ್ರೆಸ್ ಮಾತ್ರ ಎಂದು ಎಐಸಿಸಿ ಕಾರ್ಯದರ್ಶಿ ರೋಜಿ ಎಂ ಜಾನ್ ಹೇಳಿದರು.
ಕೆಪಿಸಿಸಿ ನಿರ್ದೇಶನದ ಮೇರೆಗೆ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ವಗ್ಗದ ಕಾರಿಂಜ ಕ್ರಾಸ್ ಬಳಿ ಮಾ. 24 ರಂದು ನಡೆದ ಕರಾವಳಿ ಪ್ರಜಾಧ್ವನಿ ಯಾತ್ರಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೋದಿ ಸರಕಾರ ಬಂದು ಎರಡನೇ ಅವಧಿ ಕೂಡಾ ಮುಗಿಯುತ್ತಾ ಬಂದಿದ್ದು, ಇನ್ನು ಯಾವಾಗ ಮೋದಿ ಹೇಳಿದ ಅಚ್ಚೇ ದಿನ್ ಬರೋದೋ ಆ ದೇವರೇ ಬಲ್ಲ. ಹದಿನೈದು ಲಕ್ಷವೂ ಇಲ,್ಲ ಕಪ್ಪು ಹಣವೂ ಇಲ್ಲ, ಪೆಟ್ರೋಲ್ ಡೀಸೆಲ್ ನೂರರ ಗಡಿ ದಾಟಿ ಆಗಿದೆ. ಇದೇನಾ ಅಚ್ಚೆ ದಿನ ಎಂದವರು ಪ್ರಶ್ನಿಸಿದರು.
ರಾಹುಲ್ ಗಾಂಧಿ ವಿಷಯದಲ್ಲಿ ಅನುಸರಿಸಿದ ನೀತಿ ವಿರುದ್ದ ಕಾಂಗ್ರೆಸ್ ಹೋರಾಟ ಮುಂದುವರಿಸಲಿದೆ. ಜನರನ್ನು ವಿಭಾಗಿಸಿ ಆಳುವುದು ಕಾಂಗ್ರೆಸ್ ಪಕ್ಷದ ನೀತಿಯಲ್ಲ. ಎಲ್ಲ ವರ್ಗದ ಜನರ ಏಳಿಗೆಯೇ ಕೈ ಪಕ್ಷದ ಪ್ರಮುಖ ಧ್ಯೇಯವಾಗಿದೆ. ಇಂತಹ ಬಹು ಸಂಸ್ಕøತಿ ಹೊಂದಿದ ಜನಪರ ಪಕ್ಷದ ಈ ಬಾರಿಯ ಚುನಾವಣಾ ಪ್ರಥಮ ಪಟ್ಟಿಯಲ್ಲೇ ರಮಾನಾಥ ರೈ ಉಮೇದುವಾರಿಕೆ ಘೋಷಣೆಯಾಗಿರುವುದು ಬಂಟ್ವಾಳ ಕ್ಷೇತ್ರದ ಜನರ ಪಾಲಿನ ಮೊದಲ ಮುನ್ನಡೆಯಾಗಿದೆ. ಮುಂದಿನ ಕೆಲ ದಿನಗಳಲ್ಲಿ ಕ್ಷೇತ್ರದ ಕಾರ್ಯಕರ್ತರು, ಮತದಾರ ಬಂಧುಗಳು ವಿರಮಿಸದಿರಿ. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬರಲಿದೆ ಎಂಬುದನ್ನು ಸ್ವತಃ ಬಿಜೆಪಿಗರೇ ಒಪ್ಪಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದ ಅವರು ಕಾಂಗ್ರೆಸ್ ಪಕ್ಷದ ಬದ್ದತೆ ಅರ್ಥ ಮಾಡಿಕೊಳ್ಳಲು ಗತ ಇತಿಹಾಸ ಅಧ್ಯಯನ ಮಾಡಬೇಕಾಗಿಲ್ಲ. ಕೇವಲ ಸಿದ್ದರಾಮಯ್ಯ ಯುಗವನ್ನೊಮ್ಮೆ ತಿರುಗಿ ನೋಡಿದರೆ ಸಾಕು ಎಂದು ನೆನಪಿಸಿದರು.
ದಿಕ್ಸೂಚಿ ಭಾಷಣ ಮಾಡಿದ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಬಂಟ್ವಾಳ ಕೆಂಪಯ್ಯ ಹರಿಪ್ರಸಾದ್ ಅವರು, ಬಿಜೆಪಿ ಅವಧಿಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಶಿಕ್ಷಣ ಕ್ಷೇತ್ರದ ಫಲಿತಾಂಶದಲ್ಲೂ ಹಿಂದೆ ಬಿದ್ದಿದೆ. ಒಂದು ಎರಡನೇ ಸ್ಥಾನದಲ್ಲಿ ಫಲಿತಾಂಶ ಪಟ್ಟಿಯಲ್ಲಿ ಬರುತ್ತಿದ್ದ ಅವಳಿ ಜಿಲ್ಲೆಗಳು ಇದೀಗ ಹದಿನೆಂಟನೇ ಸ್ಥಾನಕ್ಕೂ ಕೆಳಗಿಳಿದಿದೆ. ಅಂದರೆ ಶಿಕ್ಷಣ ಕ್ಷೇತ್ರವನ್ನೂ ಬಿಜೆಪಿ ಸರಕಾರ ಬಾಧಿಸಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು ಎಂದರು.
ಆಹಾರ, ವಸತಿ, ಉಡುಗೆ, ಆರೋಗ್ಯ, ಶಿಕ್ಷಣ ಇದನ್ನು ಸಮಾನವಾಗಿ ಕೊಡುವುದು ಚುನಾಯಿತ ಸರಕಾರದ ಆದ್ಯತೆಯಾಗಿದ್ದು, ಬಿಜೆಪಿ ಸರಕಾರದಲ್ಲಿ ಇದು ಸಮಾನವಾಗಿ ಪಾಲನೆಯಾಗುತ್ತಿದೆಯಾ ಎಂದು ಪ್ರಶ್ನಿಸಿದ ಬಿ ಕೆ ಹರಿಪ್ರಸಾದ್ ಮೋದಿ ಭರವಸೆ ನೀಡಿದ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಎಲ್ಲಿ? ಕಾಂಗ್ರೆಸ್ ಪಕ್ಷ ಉಳುವವನೇ ಒಡೆಯನಾಗಿ ಮಾಡಿದರೆ, ಬಿಜೆಪಿ ಉಳ್ಳವನೇ ಒಡೆಯ ಎಂದು ಮಾಡ್ತಾ ಇದೆ ಎಂದು ಟೀಕಿಸಿದರು.
ಜನರಿಗೆ ಕಾರ್ಯಕ್ರಮ ಕೊಡದೆ ಇರುವಾಗ ಧರ್ಮಾಧಾರಿತ ರಾಜಕೀಯ ಬಿಟ್ಟರೆ ಇನ್ನೇನು ಮಾಡಿಯಾರು? ಎಂದು ವ್ಯಂಗ್ಯವಾಡಿದ ಹರಿಪ್ರಸಾದ್ ಬ್ರಿಟಿಷರಿಗೆ ಕ್ಷಮಾಪತ್ರ ಬರೆದುಕೊಟ್ಟ ಸಾವರ್ಕರ್ ಸಂತತಿಗಳು ನಾವಲ್ಲ. ಬ್ರಿಟಿಷರಿಗೇ ಮಂಡಿಯೂರದ ಗಾಂಧಿ-ನೆಹರು ಕುಟುಂಬದ ಗೌರವದ ಪಟಾಲಂ ಇದು ಕಾಂಗ್ರೆಸ್. ಬಲ್ಕೀಸ್ ಬಾನು ಪ್ರಕರಣದಲ್ಲಿ ಅತ್ಯಾಚಾರಿಗಳಿಗೆ ಕ್ಲೀನ್ ಚಿಟ್ ನೀಡಿದ ಗುಜರಾತ್ ಕೋರ್ಟಿನಿಂದ ಹೆಚ್ಚಿನ ನಿರೀಕ್ಷೆ ಏನೂ ಉಳಿದಿಲ್ಲ. ರಾಹುಲ್ ಗಾಂಧಿ ಭಾಷಣದ ಮಾತಿಗೆ ನಾವೂ ಬದ್ದರಾಗಿದ್ದೇವೆ. ನಮ್ಮನ್ನು ಅವರ ಜೊತೆ ಜೈಲಿಗೆ ಹಾಕಿ ಎಂದು ಸವಾಲು ಹಾಕಿದರು.
ಗಡೀಪಾರು ಆದವರಿಗೆ, ಭ್ರಷ್ಟಾಚಾರದಲ್ಲಿ ಜೈಲಿಗೆ ಹೋಗಿ ಬಂದವರಿಗೆ ಜೈಕಾರ, ಹೂ ಹಾರ ಹಾಕುವ ಮಂದಿ ಬಿಜೆಪಿಯಲ್ಲಿರುವುದು. ಭ್ರಷ್ಟೋತ್ಸವ ಮಾಡುವ ಬಿಜೆಪಿಗರಿಗೆ ಕರ್ನಾಟಕದಲ್ಲಿ ಜನ ಯಾವತ್ತೂ ಸರಕಾರ ರಚಿಸುವ ಯೋಗ್ಯತೆ ನೀಡಿಲ್ಲ. ಕತ್ತೆ, ದನ, ನಾಯಿ ತರ ಎಂಎಲ್ಲೆಗಳನ್ನು ಖರೀದಿಸಿ ಸರಕಾರ ರಚಿಸಿದ್ದೀರಿ ಎಂಬುದನ್ನು ನೆನಪಿಸಿಕೊಳ್ಳಿ ಎಂದು ಟೀಕಿಸಿದ ಹರಿಪ್ರಸಾದ್ ರಾಜಕೀಯವನ್ನು ರಾಜಕೀಯವಾಗಿ ಎದುರಿಸಲಾಗದ ಹಾಗೂ ಕನಿಷ್ಠ ಪತ್ರಿಕಾಗೋಷ್ಠಿ ನಡೆಸಿ ಪತ್ರಕರ್ತರಿಗೂ ಮುಖ ತೋರಿಸಲಾಗದ ಹೆದರುಪುಕ್ಕಲರು ದೇಶ ಆಳುತ್ತಿರುವುದು ದುರಂತ ಎಂದು ಗುಡುಗಿದರು.
ಇದೇ ವೇಳೆ ಮಾತನಾಡಿದ ಮಾಜಿ ಸಚಿವ, ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ ರಮಾನಾಥ ರೈ, ಒಂಭತ್ತನೇ ಬಾರಿಗೆ ಸ್ಪರ್ಧಿಸಲು ಅವಕಾಶ ನೀಡಿದ ಪಕ್ಷಕ್ಕೆ ಚಿರ ಋಣಿ. ಇದಕ್ಕೆ ಕಾರಣಕರ್ತರಾದ ಪಕ್ಷದ ಕಾರ್ಯಕರ್ತರು, ಮತದಾರರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
ಜನರ ಜೀವದ ಜೊತೆ ಚೆಲ್ಲಾಟ ಆಡಿ ಕಾಂಗ್ರೆಸ್ ಯಾವತ್ತೂ ಸೋಲು-ಗೆಲುವಿನ ಲೆಕ್ಕಾಚಾರ ಮಾಡಿಲ್ಲ. ಚುನಾವಣೆ ಸೋಲು ಗೆಲುವಿನ ಜೊತೆಗೆ ಸಾಮಾಜಿಕ ಸಾಮರಸ್ಯ ಮುಖ್ಯ ಎಂಬುದನ್ನು ಕಾಂಗ್ರೆಸ್ ಮನಗಂಡು ರಾಜಕೀಯ ಮಾಡುತ್ತಿದೆ ಎಂದು ರಮಾನಾಥ ರೈ ಹೇಳಿದರು.
ವಿಧಾನಪರಿಷತ್ ಸದಸ್ಯ, ದ ಕ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ರಾಜ್ಯಸಭಾ ಮಾಜಿ ಸದಸ್ಯ ಬಿ ಇಬ್ರಾಹಿಂ, ಕೆಪಿಸಿಸಿ ಸದಸ್ಯರಾದ ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಕೆ ಕೆ ಶಾಹುಲ್ ಹಮೀದ್, ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಿ ಸಿ ರೋಡು, ಪಂಚಾಯತ್ ರಾಜ್ ಒಕ್ಕೂಟದ ದ ಕ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರುಗಳಾದ ಸುರೇಶ್ ಪೂಜಾರಿ ಜೋರಾ, ಇಬ್ರಾಹಿಂ ನವಾಝ್ ಬಡಕಬೈಲು, ಬಂಟ್ವಾಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲವೀನಾ ವಿಲ್ಮಾ ಮೊರಾಸ್, ಹಿರಿಯ ನಾಯಕ ಜಿನರಾಜ ಅರಿಗ, ಕಾವಳಮೂಡೂರು ಗ್ರಾ ಪಂ ಅಧ್ಯಕ್ಷೆ ರಜನಿ ವೇದಿಕೆಯಲ್ಲಿದ್ದರು.
ಇದೇ ವೇಳೆ ಬಂಟ್ವಾಳ ಬ್ಲಾಕ್ ವ್ಯಾಪ್ತಿಯ ಹಲವು ಮಂದಿ ಬಿಜೆಪಿ ಹಾಗೂ ಎಸ್ ಡಿ ಪಿ ಐ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಜಿ ಪಂ ಮಾಜಿ ಸದಸ್ಯ ಬಿ ಪದ್ಮಶೇಖರ ಜೈನ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ ಮಾಯಿಲಪ್ಪ ಸಾಲ್ಯಾನ್, ಬಂಟ್ವಾಳ ಪುರಸಭಾ ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್, ಲೋಲಾಕ್ಷ ಶೆಟ್ಟಿ, ಬಿ ವಾಸು ಪೂಜಾರಿ, ಜನಾರ್ದನ ಚೆಂಡ್ತಿಮಾರ್, ಮುಹಮ್ಮದ್ ನಂದರಬೆಟ್ಟು, ಪ್ರಮುಖರಾದ ಸಂಪತ್ ಕುಮಾರ್ ಶೆಟ್ಟಿ, ಉಮೇಶ್ ಕುಲಾಲ್ ನಾವೂರು, ಸುದರ್ಶನ ಜೈನ್, ರಾಜೇಶ್ ರೋಡ್ರಿಗಸ್, ಪ್ರವೀಣ್ ರೋಡ್ರಿಗಸ್ ವಗ್ಗ, ವೆಂಕಪ್ಪ ಪೂಜಾರಿ, ಬಿ ಮೋಹನ್, ಕೆ ಪದ್ಮನಾಭ ರೈ, ಚಂದ್ರಶೇಖರ ಪೂಜಾರಿ, ರಿಯಾಝ್ ಹುಸೈನ್ ಬಂಟ್ವಾಳ, ಸಂಜೀವ ಪೂಜಾರಿ ಬೊಳ್ಳಾಯಿ, ಅರ್ಶದ್ ಸರವು, ಶಬೀರ್ ಸಿದ್ದಕಟ್ಟೆ, ರಝಾಕ್ ಬಾಂಬಿಲ ಮೊದಲಾದವರು ಭಾಗವಹಿಸಿದ್ದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಸ್ವಾಗತಿಸಿ, ವಿಧಾನಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಪ್ರಸ್ತಾವನೆಗೈದರು. ಚಂದ್ರಶೇಖರ ಕರ್ಣ ವಂದಿಸಿ, ರಾಜೀವ್ ಶೆಟ್ಟಿ ಎಡ್ತೂರು ಹಾಗೂ ಜಗದೀಶ್ ಕೊಯಿಲ ಕಾರ್ಯಕ್ರಮ ನಿರೂಪಿಸಿದರು.

whatsapp image 2023 03 25 at 5.23.55 pm
Sponsors

Related Articles

Back to top button