ಹ್ಯೂಮಾನಿಟಿ ಫೌಂಡೇಷನ್ ನಿಂದ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಸನ್ಮಾನ…

ಮಂಗಳೂರು: ಮೊಂಟೆಪದವು ಪಬ್ಲಿಕ್ ಸ್ಕೂಲ್ ವಿದ್ಯಾಸಂಸ್ಥೆಯಲ್ಲಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹ್ಯುಮಾನಿಟಿ ಫೌಂಡೇಷನ್ ಮಂಗಳೂರು ಇದರ ವತಿಯಿಂದ ಸನ್ಮಾನಿಸಲಾಯಿತು.
ಮೊಂಟೆಪದವು ಪಬ್ಲಿಕ್ ಸ್ಕೂಲ್ ಸಭಾಂಗಣದಲ್ಲಿ ಸೆ.18 ರಂದು ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಮಾತನಾಡಿ ” ಮಕ್ಕಳ ಪರಿಶ್ರಮ ಮತ್ತು ಪ್ರತಿಭೆ ಗುರುತಿಸುವ ನಿಟ್ಟಿನಲ್ಲಿ ನಡೆಯುವ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣವಾಗಿರುತ್ತದೆ ಮಾತ್ರವಲ್ಲದೆ ಅರ್ಥಿಕ ಸಮಸ್ಯೆಯು ವಿದ್ಯಾಭ್ಯಾಸಕ್ಕೆ ಅಡಚಣೆಯಾಗಬಾರದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮೊಂಟೆಪದವು ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲರಾದ ವನಿತ ದೇವಾಡಿಗ, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರ, ಉಪ ಪ್ರಾಂಶುಪಾಲರಾದ ಸಂತೋಷ್ ಟಿ.ಎನ್, ಮುರಳೀಧರ ಶೆಟ್ಟಿ‌ ಮೋರ್ಲ, ಎನ್ ಎಸ್ ಕರೀಂ, ಹನೀಫ್ ಚಂದಹಿತ್ಲು ಹ್ಯೂಮಾನಿಟಿ ಫೌಂಡೇಷನ್ ಉಪಾಧ್ಯಕ್ಷರುಗಳಾದ ಯೂಸುಫ್ ಉಚ್ಚಿಲ, ಜಾಫರ್ ಉಳ್ಳಾಲ,ಕೋಶಾದಿಕಾರಿ ಇಲ್ಯಾಸ್ ಚಾರ್ಮಾಡಿ, ಪದಾಧಿಕಾರಿಗಳಾದ ಕಲಂದರ್ ನಾಟಕಲ್, ಶಂಸೀರ್ ಕುತ್ತಾರ್, ಆಸೀಫ್ ಕುತ್ತಾರ್, ಇಕ್ಬಾಲ್ ದೇರಳಕಟ್ಟೆ, ಝಮೀರ್ ತೊಕ್ಕೊಟ್ಟು, ಕಲೀಲ್‌ ಪನೀರ್, ಸೈಫುಲ್ಲಾ ಸೋಮೇಶ್ವರ, ಅಝೀಝ್ ಮದ್ಪಾಡಿ ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ 2019- 0 ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಇತರ ವಿದ್ಯಾರ್ಥಿಗಳನ್ನು ಕೂಡ ಸನ್ಮಾನಿಸಲಾಯಿತು.
ಹ್ಯೂಮಾನಿಟಿ ಫೌಂಡೇಷನ್ ಅಧ್ಯಕ್ಷರಾದ ನಾಸಿರ್ ಸಾಮನಿಗೆ ಸಂಸ್ಥೆಯ ಕಿರು ಪರಿಚಯ ಮಾಡಿ ಅತಿಥಿಗಳನ್ನು ಸ್ವಾಗತಿಸಿದರು.ರಹ್ಮಾನ್ ಚಂದಹಿತ್ಲು ವಂದಿಸಿದರು, ಪ್ರಧಾನ ಕಾರ್ಯದರ್ಶಿ ಹಮೀದ್ ಪಜೀರ್ ಕಾರ್ಯಕ್ರಮ ನಿರೂಪಿಸಿದರು.

D0292849 4652 4c6f Ae04 83691e009b76 300x169 102e4b93 406a 40e2 Af37 054b7c7424df 300x138 77dc452b F215 47af 9338 Fd99cb284589 300x169

Related Articles

Leave a Reply

Your email address will not be published. Required fields are marked *