ಐವತ್ತೊಕ್ಲು ಕುಂಞಪಳ್ಳಿ ವಕೀಲರ ಸಾರ್ವಜನಿಕ ನುಡಿನಮನ, ಶ್ರದ್ದಾoಜಲಿ ಕಾರ್ಯಕ್ರಮ…

ಮಾನವೀಯ ಮೌಲ್ಯಗಳ ಪ್ರತಿಪಾದಕ ಕುಂಞಪಳ್ಳಿ ಸುಳ್ಯದಲ್ಲಿ ಸೌಹಾರ್ದತೆ ಗೆ ಬುನಾದಿ ಹಾಕಿದವರು : ಪದ್ಮಶ್ರೀ ಗಿರೀಶ್ ಬಾರದ್ವಾಜ್...

ಸುಳ್ಯ: ಇತ್ತೀಚೆಗೆ ನಿಧನ ಹೊಂದಿದ ಸುಳ್ಯ ತಾಲೂಕು ಬೋರ್ಡ್ ಮಾಜಿ ಅಧ್ಯಕ್ಷ, ದ. ಕ. ಜಿಲ್ಲಾ ಪರಿಷತ್ ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ, ಸುಳ್ಯದ ಪ್ರಥಮ ನೋಟರಿ, ಮುಸ್ಲಿಂ ಸಮುದಾಯದ ಸುಳ್ಯದ ಪ್ರಥಮ ನ್ಯಾಯವಾದಿ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ರಂಗದಲ್ಲಿ ಅನನ್ಯ ಸೇವೆ ಸಲ್ಲಿಸಿ ಜನಾನು ರಾಗಿಯಾದ ಪ್ರತಿಷ್ಠಿತ ಐವತ್ತೊಕ್ಲು ಮನೆತನದ ಮೇರು ವ್ಯಕ್ತಿ ಕುಂಞಪ್ಪಳ್ಳಿ ವಕೀಲರಿಗೆ ಸಾರ್ವಜನಿಕ ನುಡಿ ನಮನ ಮತ್ತು ಶ್ರದ್ದಾoಜಲಿ ಕಾರ್ಯಕ್ರಮ ಸುಳ್ಯ ಅನ್ಸಾರಿಯ ಗಲ್ಫ್ ಆಡಿಟೋರಿಯಂ ನಲ್ಲಿ ಜರಗಿತು.
ಅಧ್ಯಕ್ಷತೆಯನ್ನು ಸುಳ್ಯ ವಕೀಲರ ಸಂಘ ದ ಅಧ್ಯಕ್ಷ ಅಡ್ವೋಕೇಟ್ ಸುಕುಮಾರ್ ಕೊಡ್ತುಗುಳಿ ವಹಿಸಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪದ್ಮ ಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್ ಭಾರದ್ವಾಜ್ ಮಾತನಾಡಿ ತನ್ನ ಪೂರ್ಣ ಆಯುಷ್ಯ ವನ್ನು ಸಮಾಜದಲ್ಲಿ ಅಪೂರ್ವ ವೆನಿಸಿದ ರೀತಿಯಲ್ಲಿ ಬದುಕಿ ದಶಕಗಳ ಹಿಂದೆ ಸುಳ್ಯದಲ್ಲಿ ಸಾಮರಸ್ಯ, ಸೌಹಾರ್ದತೆಯ ಮೇಲ್ಪoಕ್ತಿ ಹಾಕಿದ ಕುoಞಪಳ್ಳಿ ಯವರ ಯಶಸ್ವಿ ಜೀವನ ಇತರರಿಗೆ ಮಾದರಿ ಎಂದರು.
ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಎಂ. ಬಿ. ಸದಾಶಿವ, ಸುಳ್ಯ ತಾಲೂಕು ಬಂಟರ ಸಂಘದ ಅಧ್ಯಕ್ಷ ಎನ್. ಜಯಪ್ರಕಾಶ್ ರೈ, ಸುಳ್ಯ ತಾಲೂಕು ಗೌಡ ಯುವ ಸೇವಾ ಸಂಘದ ಅಧ್ಯಕ್ಷ ಪಿ, ಎಸ್. ಗಂಗಾಧರ್, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಂ. ವೆಂಕಪ್ಪ ಗೌಡ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಶ್ರೀ ಕ್ಷೇತ್ರ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ. ಆರ್. ಗಂಗಾಧರ್, ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಪಿ. ಬಿ. ಸುಧಾಕರ್ ರೈ, ರಾಜ್ಯ ಕಾರ್ಮಿಕ ಕಲ್ಯಾಣ ಇಲಾಖೆ ಪರಿಷತ್ ರಾಜ್ಯ ಸಮಿತಿ ಸದಸ್ಯ ಕೆ. ಪಿ. ಜಾನಿ, ಶ್ರೀ ಶಾರದಾoಭ ಸೇವಾ ಸಮಿತಿ ಗೌರವಾಧ್ಯಕ್ಷ ಗೋಕುಲ್ ದಾಸ್, ಗಾಂಧಿನಗರ ಜುಮ್ಮಾ ಮಸ್ಜಿದ್ ಅಧ್ಯಕ್ಷ ಹಾಜಿ ಮಹಮ್ಮದ್ ಕೆಎಂಎಸ್, ಎಸ್. ಸಂಶುದ್ದೀನ್, ಹಮೀದ್ ಕುತ್ತಾಮೊಟ್ಟೆ, ಚಂದ್ರಶೇಖರ ಪೇರಾಲ್, ದಾಮೋದರ ಗೌಡ ಮೊದಲಾದ ಗಣ್ಯರು ಭಾಗವಹಿಸಿದ್ದರು.
ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ ಸ್ವಾಗತಿಸಿ, ಕೆಪೆಕ್ ಮಾಜಿ ನಿರ್ದೇಶಕ ಪಿ. ಎ. ಮಹಮ್ಮದ್ ವಂದಿಸಿದರು.
ಪ್ರಾರಂಭದಲ್ಲಿ ಅನ್ಸಾರಿಯಾ ಎಜುಕೇಶನ್ ಸೆಂಟರ್ ಹಿಫ್ ಳುಲ್ ಖುರ್ ಆನ್ ಕಾಲೇಜು ಪ್ರಾoಶುಪಾಲರಾದ ಹಾಫಿಳ್ ಹಾಮಿದ್ ಹಿಮಮಿ ಸಖಾಫಿ ಮೃತರ ಮಗಫಿರತ್ ಗಾಗಿ ಪ್ರಾರ್ಥನೆ ನೆರವೇರಿಸಿದರು. ಚಿರಶಾಂತಿ ಗಾಗಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

whatsapp image 2025 07 04 at 9.30.21 pm

Sponsors

Related Articles

Back to top button